ಗಣಪತಿಗೆ ಬೆಳ್ಳಿ ಕವಚ ಅರ್ಪಣೆ

02Kush02
ಕುಶಾಲನಗರದ ರಾಧಾಕೃಷ್ಣ ಮೆಡಿಕಲ್ಸ್ ಶ್ರೀೀಪತಿ ಕುಟುಂಬಸ್ಥರು ಶನಿವಾರ ಗಣಪತಿಗೆ ದುರ್ಗ ಅವತಾರದ ಕವಚವನ್ನು ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು, ಶ್ರೀನಿವಾಸ ರಾವ್ ಅವರಿಗೆ ಹಸ್ತಾಂತರಿಸಿದರು.
Published on

ಕುಶಾಲನಗರ: ಇಲ್ಲಿನ ಶ್ರೀ ಮಹಾಗಣಪತಿ ರಥೋತ್ಸವದ ನಿಮಿತ್ತ ಶನಿವಾರ ರಾಧಾಕೃಷ್ಣ ಮೆಡಿಕಲ್ಸ್ ಮಾಲೀಕ ಎಸ್.ಎಲ್.ಶ್ರೀಪತಿ ಕುಟುಂಬಸ್ಥರು ಗಣೇಶ ಪುರಾಣದಲ್ಲಿ ಉಕ್ತವಾದಂತೆ ಶ್ರೀ ಗಣಪತಿ ದೇವರ 32 ಅವತಾರಗಳ ಪೈಕಿ ದುರ್ಗಾ ಗಣಪತಿ ಅವತಾರದ ಬೆಳ್ಳಿ ಕವಚವನ್ನು ಅರ್ಪಣೆ ಮಾಡಿದರು.

ಅಲಂಕಾರ ಸಹಿತ ಮಹಾ ಗಣಪತಿಗೆ ಕವಚವನ್ನು ಅಳವಡಿಸಿ ಭಾನುವಾರ ಮಧ್ಯಾಹ್ನ 12 ಗಂಟೆಗೆ ನಡೆಯುವ ಮಹಾ ಮಂಗಳಾರತಿಯ ನಂತರ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿದೆ ಎಂದು ದೇವಾಲಯದ ಗೌರವ ಅಧ್ಯಕ್ಷ ವಸಂತ್ ಕುಮಾರ್ ತಿಳಿಸಿದ್ದಾರೆ. 1958ರಲ್ಲಿ ನೋಟಿಫೈಡ್ ಏರಿಯಾ ಪ್ರೆಸಿಡೆಂಟ್ ಆಗಿದ್ದ ಎಸ್.ಎನ್.ಲಕ್ಷ್ಮಣ ಶೆಟ್ಟಿ ಮತ್ತು ಸರಸ್ವತ್ತಮ್ಮ ಅವರ ಸ್ಮರಣಾರ್ಥ ಪುತ್ರ ಶ್ರೀಪತಿ ಕುಟುಂಬಸ್ಥರು ಬೆಳ್ಳಿ ಕವಚ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net