ಗಾನಮಲ್ಲಿಗೆ ಕಾರ್ಯಕ್ರಮ ಅ. ೫ಕ್ಕೆ

3 ckm 4 mallige sudheer
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಅಧ್ಯಕ್ಷ ಮಲ್ಲಿಗೆ ಸುಧೀರ್ ಮಾತನಾಡಿದರು.
Published on

ಚಿಕ್ಕಮಗಳೂರು: ಎಲ್ಲ ಪ್ರಕಾರದ ಗೀತೆಗಳ ಗಾಯನ ಕಾವ್ಯ ಸಂಗೀತ ಸಂಜೆ, ಮಲ್ಲಿಗೆ ಪುರಸ್ಕಾರ, ಗಾನ ಮಲ್ಲಿಗೆ-೫೫ ಕಾರ್ಯಕ್ರಮ ಅ. ೫ರಂದು ಸಂಜೆ ೪.೩೦ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಅಧ್ಯಕ್ಷ ಮಲ್ಲಿಗೆ ಸುಧೀರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಕಲ್ಕಟ್ಟೆ ಪುಸ್ತಕದ ಮನೆ, ಬೀರೂರು ಮಲ್ಲಿಗೆ ಬಳಗ, ಹರಿಓಂ ಬಿಲ್ಡರ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ದಾಸವಾಣಿ ಝೇಂಕಾರ ಧ್ವನಿಯ ಶಂಕರ ಶಾನುಭೋಗ್ ಮತ್ತು ತಂಡದವರಿAದ ಗೀತಗಾಯನ ನಡೆಯಲಿದ್ದು, ವಾರ್ಷಿಕ ಮಲಿಗೆ ಪುರಸ್ಕಾರವನ್ನು ಶಿವಮೊಗ್ಗದ ನಾದಚತುರ ಪಂಡಿತ್ ತುಕಾರಾಂ ರಾವ್ ರಂಗದೊಳ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಬೀರೂರಿನ ಮಲ್ಲಿಗೆ ಬಳಗ, ವಿಠಲ ಯುವ ಭಜನಾ ಮಂಡಳಿ, ಆರಾಧನಾ ಸಂಗೀತ ಶಾಲೆ, ಕಡೂರಿನ ವೀರಾಂಜನೇಯ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ರಸಸಂಜೆ ಕಾರ್ಯಕ್ರಮದಲ್ಲಿ ಡಾ. ಜೆ.ಪಿ. ಕೃಷ್ಣೇಗೌಡ, ಸ. ಗಿರಿಜಾಶಂಕರ, ಡಾ. ಸಿ.ಕೆ.ಸುಬ್ರಾಯ, ಮಂಜುನಾಥ ಜೋಷಿ, ಡಾ. ಸಿ.ರಮೇಶ್, ವಿನಯ್ ಕುಮಾರ್, ಕೆ.ಆರ್.ಅನಿಲ್ ಕುಮಾರ್, ರೇಖಾ ನಾಗರಾಜ್ ರಾವ್, ಸ್ವರ್ಣ ಗುರುನಾಥ್, ಅನಿತಾ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಖಜಾಂಚಿ ಮಂಜುಳಾ ಮಹೇಶ್, ಗಾಯಕ ಮೋಹನ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net