

ಧಾರವಾಡ: ಹಾವೇರಿಯ ನಗರದ ಕಲಾಸ್ಪಂದನದಿ೦ದ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಅ. 28ರಂದು ಸಂಜೆ 5.30ಕ್ಕೆ ಗಾನಲಹರಿ ಭಾವಗೀತೆಗಳ ಸಂಗಮ ಕಾರ್ಯಕ್ರಮ, ವೈದ್ಯಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕಲಾಸ್ಪಂದನ ಉಪಾಧ್ಯಕ್ಷ ಮಾರ್ತಾಂಡಪ್ಪ ಕತ್ತಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ನೇ ಸಾಲಿನ ವೈದ್ಯಶ್ರೀ ಪ್ರಶಸ್ತಿಯನ್ನು ಗದಗನ ಡಾ. ಶ್ವೇತಾ ಪ್ರಕಾಶ ಸಂಕನೂರು ಅವರಿಗೆ ಪ್ರದಾನ ಮಾಡಲಾಗುವುದು. ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಯುವಗಾಯಕಿ ಮಹಾನಂದಾ ಗೋಸಾವಿ ಹಾಗೂ ಪ್ರೇಮಾನಂದ ಶಿಂಧೆ ಅವರಿಂದ ಗಾನಲಹರಿ ಭಾವಗೀತೆಗಳ ಸಂಗಮ ಕಾರ್ಯಕ್ರಮ ಜರುಗುವುದು. ನೃತ್ಯ ನಿರ್ದೇಶಕರಾದ ಸೈಯದ್ ಎ.ಎಂ. ಹಾಗೂ ಮಲ್ಲನಗೌಡ ಪಾಟೀಲ ತಂಡದಿ೦ದ ಜನಪದ ನೃತ್ಯ ಸಂಭ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಪ್ರೇಮಾನಂದ ಶಿಂಧೆ, ಎಂ.ಎಸ್. ಫರಾಸ್, ಸುರೇಶ ಬೆಟಗೇರಿ, ಇತರರಿದ್ದರು.