ಗಳಿಗೆಕೆರೆ ಕೃಷಿ ಪತ್ತಿನ ಸಂಘಕ್ಕೆ 7 ಲಕ್ಷ ರೂ. ನಿವ್ವಳ ಲಾಭ

24 KRN-1
Published on

 ಕೆ.ಆರ್.ನಗರ: ಹತ್ತು ವರ್ಷಗಳ ನನ್ನ ಆಡಳಿತವಾಧಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದೆ ಅಭಿವೃದ್ಧಿ ಪೂರಕವಾದ ಆಡಳಿತ ನಡೆಸಿದ ಪರಿಣಾಮ ಪ್ರಸಕ್ತ ಸಾಲಿನಲ್ಲಿ 7 ಲಕ್ಷ ರೂ. ನಿವ್ವಳ ಲಾಭ ಗಳಿಸಲಾಗಿದೆ ಎಂದು ಗಳಿಗೆಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಮಿತ್ ವಿ.ದೇವರಹಟ್ಟಿ ಹೇಳಿದರು.

ತಾಲೂಕಿನ ಗಳಿಗೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘಕ್ಕೆ ಸಮುದಾಯ ಭವನ ನಿರ್ಮಿಸಲಾಗಿದ್ದು ರೈತರ ಉಪಯೋಗಕ್ಕಾಗಿ ಕೃಷಿ ಇಲಾಖೆಯಿಂದ ರಸಗೊಬ್ಬರ, ಬಿತ್ತನೆ ಬೀಜ, ಟ್ಯ್ರಾಕ್ಟರ್ ಮತ್ತು ಪವರ್‌ಟಿಲ್ಲರ್ ಖರೀದಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.

ಪಡಿತರ ವಿತರಣೆಗೆ ಆಹಾರ ಇಲಾಖೆಯಿಂದ ಅನುಮತಿ ಕೇಳಲಾಗಿದೆ. ಅನುಮತಿ ದೊರೆತ ತಕ್ಷಣ ಪಡಿತರ ವಿತರಣೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಶಾಸಕ ಡಿ.ರವಿಶಂಕರ್ ಅನುದಾನವನ್ನು ಬಳಕೆ ಮಡಿಕೊಂಡು ಮುಂದಿನ ಸಭೆಯೊಳಗೆ ಭವನದಲ್ಲಿನ ಎಲ್ಲ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಂಘದಲ್ಲಿ 1573 ರೈತ ಸದಸ್ಯರಿದ್ದು, ಅವರಿಗೆ 10 ಕೋಟಿ ರೂ.ಸಾಲ ವಿತರಿಸಲಾಗಿದೆ. ಮುಂದಿನ ವರ್ಷ 12 ಕೋಟಿ ರೂ.ಗೂ ಹೆಚ್ಚು ಸಾಲ ವಿತರಣೆ ಮಾಡುವ ಹಾಗೂ 10 ಲಕ್ಷಕ್ಕೂ ಹೆಚ್ಚು ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಎಂ.ಜಿ.ಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಟಿ.ಉಮೇಶ್ ಮಾತನಾಡಿದರು. ಸಿಇಒ ಡಿ.ಎಂ.ಪುಟ್ಟೇಗೌಡ ವಾರ್ಷಿಕ ವರದಿ ಮತ್ತು 2025-26ನೇ ಸಾಲಿನ ಆಯವ್ಯಯ ಮಂಡಿಸಿ ಅನುಮೋದನೆ ಪಡೆದರು. ನಿರ್ದೇಶಕರಾದ ಡಿ.ಕೆ.ಜಾಣೇಗೌಡ, ರಾಮಕೃಷ್ಣೇಗೌಡ, ರಾಜೇಗೌಡ, ಎಂ.ಎಸ್.ಮಹದೇವ್, ಕೆ.ಕೆ.ಮಲ್ಲೇಶ್, ಮೂರ್ತಿ, ಮಧು, ಕಿರಣ್, ಕೆ.ಸಿ.ಪ್ರಕಾಶ್, ವೈ,ಪಿ,ವೇದಾವತಿ, ರಾಜೇಶ್ವರಿ, ಸುಜೇಂದ್ರ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಡಿ.ಸಿ.ರವಿ, ಸಿಬ್ಬಂದಿ ಡಿ.ಸುರೇಶ್, ಕೆ.ಮಹದೇವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net