

ಯಲಬುರ್ಗಾ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ರಾಸಿ ಸೀಡ್ಸ್ ಸಂಸ್ಥೆಯ ಎಂಡಿ ರಾಜೇಂದ್ರನ್ ರಾಮಸ್ವಾಮಿ ಹೇಳಿದರು.
ತಾಲೂಕಿನ ಗಾಣಧಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಶಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭೋಜನಾಲಯ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಇದನ್ನು ಎಲ್ಲರೂ ಅರಿಯಬೇಕು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸ್ಥಾನ ಪಡೆದವರ ಸಂಖ್ಯೆ ಹೆಚ್ಚು ಇದೆ. ಸಂಸ್ಥೆಯಿಂದ ರೈತರು ಬೀಜೋತ್ಪಾದನೆ ಮಾಡುವ ಬೆಳೆಗಳಿಂದ ಆರ್ಥಿಕ ಸುಧಾರಣೆ ಸಾಧ್ಯವಾಗಿದೆ. ರೈತರಿಂದ ಕಂಪನಿ ಬೆಳವಣಿಗೆ ಕಂಡಿದ್ದು, ಮಕ್ಕಳಿಗಾಗಿ ಶೇ.10 ರಷ್ಟು ಲಾಭ ಶೈಕ್ಷಣಿಕ ಚಟುವಟಿಕೆಗೆ ವಿನಿಯೋಗ ಮಾಡುವಂತ ಕೆಲಸ ಸಂಸ್ಥೆ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಸರ್ಕಾರಿ ಶಾಲೆ ಎಂಬ ತಾತ್ಸಾರ ಬೇಡ
ಬಿಟಿ ಕಾಟನ್ ಅಧ್ಯಕ್ಷ ಬಸಲಿಂಗಪ್ಪ ಭೂತೆ ಮಾತನಾಡಿದರು. ಕ್ರಿಮಿನಾಶಕ ಸಿಂಪಡಿಸುವ ಸ್ಪೈಯರ್ ಪಂಪ್‌ಗಳನ್ನು ರೈತರಿಗೆ ವಿತರಿಸಲಾಯಿತು. ಶಾಲೆಯ ಆಡಳಿತ ಮಂಡಳಿಯಿಂದ ರಾಜೇಂದ್ರನ್ ರಾಮಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ನಾನಾಬಾಚ, ನಿರ್ದೇಶಕ ಶಿವಕುಮಾರ್, ಪ್ರಮುಖರಾದ ಶರಣಪ್ಪ ಈಳಿಗೇರ್, ಗುಡದೀರಪ್ಪ ಕಜ್ಜಿ, ಶರಣಪ್ಪ ಸಿಂಗಾಡಿ, ಜಗನಮೋಹನ ರೆಡ್ಡಿ, ಭಾಸ್ಕರನ್, ಪರಶುರಾಮ ಸಿಂಗಾಡಿ, ಮಹೇಶ ಭೂತೆ, ಶರಣಪ್ಪ ಸಿಂಗಾಡಿ, ವೀರನಗೌಡ ಹೊಸಗೌಡ್ರ, ಹನುಮಂತಪ್ಪ ಸಣ್ಣಗೌಡ್ರ, ಓಮಣ್ಣ ಚನ್ನದಾಸರ, ವಿನೋದ ಗೋಟೂರು, ಹನುಮಂತಪ್ಪ ನಾಗರಾಳ, ಪ್ರಭು ಬಡಿಗೇರ್, ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರಪ್ಪ ವಡ್ಡರ್, ಮುಖ್ಯಶಿಕ್ಷಕ ನಿಂಗಪ್ಪ ಚಕ್ರಸಾಲಿ, ಶಿಕ್ಷಕರಾದ