ಗಣ ಹೋಮ ಪೂಜೆ

DSC_7357
Published on

ಗದಗ: ನಗರದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಮಾರುಕಟ್ಟೆ ಪ್ರಾಂಗಣ, ಎ.ಪಿ.ಎಂ.ಸಿ.ಯಾರ್ಡ್ ನಲ್ಲಿ ಶ್ರೀ ಗಜಾನನ ಉತ್ಸವ ಸಮಿತಿ ವತಿಯಿಂದ ಗಣೇಶ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ 8 ಗಂಟೆಗೆ ಲೋಕ ಕಲ್ಯಾಣಕ್ಕಾಗಿ ಗಣ ಹೋಮ ಪೂಜೆ ನೆರವೇರಿಸಲಾಯಿತು.

ಗಣ ಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಗಜಾನನ ಉತ್ಸವ ಸಮಿತಿಯ ಅಧ್ಯಕ್ಷ ತಿಮ್ಮಣ್ಣ ಕೋನರಡ್ಡಿ ಮಾತನಾಡಿ ಎ.ಪಿ.ಎಂ.ಸಿ ಎಲ್ಲಾ ವರ್ತಕರ ನಿರ್ಣಯದಂತೆ  ರೈತರಿಗೆ ಎದುರಾಗಿರು ಸಮಸ್ಯೆ ಗಳು ಹಾಗೂ ಮುಂಗಾರು ಮಳೆ ಕೈ ಕೊಟ್ಟಿವದನ್ನು ಗಮನದಲ್ಲಿಟ್ಟುಕೊಂಡು ನಾವು ಇಂದು ಗಣ ಹೋಮ ಪೂಜೆ ಮಾಡಿದ್ದೆವೆ. ರೈತರ ಕಷ್ಠಗಳು, ವಿಘ್ನಗಳು ದೂರವಾಗಲಿ ಮಳೆ, ಬೆಳೆ ಸಮೃದ್ಧ ವಾಗಿಲಿ ಎಂದು ವಿಘ್ನೇಶ್ವರ ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆವೆ. ಭಾರತ ದೇಶದ ವಿಘ್ನಗಳು ದೂರವಾಗಿ  ಸಮೃದ್ಧ ರಾಷ್ಟ್ರವಾಗಲಿ ನಮ್ಮೆಲ್ಲರ ಇಷ್ಟಾರ್ಥ ಸಿದ್ಧಿಯಾಗಲಿ ಎಂದು ಗಣ ಹೋಮ ಮಾಡಿ ವಿಘ್ನೇಶ್ವರನಲ್ಲಿ ಮೊರೆ ಹೋಗಿದ್ದೆವೆ ಎಂದರು. ಗಣ ಹೋಮದಲ್ಲಿ ಗಜಾನನ ಉತ್ಸವ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಗಣ್ಯ ವ್ಯಾಪಾರಸ್ಥರು ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net