

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಜಾನಪಸ ಸಂಶೋಧನ ಕೇಂದ್ರ, ಬೈಲೂರಿನ ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ಪ್ರತಿಷ್ಠಾನದಿಂದ ಬಸವಲಿಂಗಯ್ಯ ಹಿರೇಮಠ ಅವರ 65ನೇ ಜನ್ಮದಿನ, ದತ್ತಿ ಉದ್ಘಾಟನೆ,ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ' ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ. 1ರಂದು ಸಂಜೆ 5 ಗಂಟೆಗೆ ಇಲ್ಲಿನ ಆಲೂರ ವೆಂಕಟರಾವ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ರಂಗ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತ ಬಂಡು ಕುಲಕರ್ಣಿ ಉದ್ಘಾಟಿಸುವರು. ಮನೋವೈದ್ಯ ಡಾ. ಆನಂದ ಪಾಂಡುರ೦ಗಿ ಅಧ್ಯಕ್ಷತೆ ವಹಿಸುವರು.
ತತ್ವಪದ ಮತ್ತು ಜಾನಪದ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಎಳ್ಳಗುತ್ತಿಯ ರಂಗಪ್ಪ ಹಲಕುರ್ಕಿ ಅವರಿಗೆ `ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ರಾಜ್ಯ ಪ್ರಶಸ್ತಿ ದತ್ತಿ ದಾನಿ ಗಜಾನನ ವೀರಪ್ಪ ಚಿನಗುಡಿ, ಶಂಕರ ಹಲಗತ್ತಿ, ಪ್ರಕಾಶ ಉಡಿಕೇರಿ, ಶಿವಾನಂದ ಶೆಲ್ಲಿಕೇರಿ, ಪ್ರೊ. ಎನ್.ಎಸ್. ಗಲಗಲಿ, ಗು.ರು. ಹಿರೇಮಠ, ಡಾ. ಬಾಳಪ್ಪ ಚಿನಗುಡಿ ಉಪಸ್ಥಿತರಿರುವರು ಎಂದರು.