ಐಐಎಂ ಕೋರ್ಸ್​ ಪಡೆದ ಗ್ಯಾನ್​ಕುಮಾರ್​

Untitled-2
ಐಐಎಂಬಿ ಕೋರ್ಸ ಮುಗಿಸಿದ ರಾಜ್ಯದ ಪ್ರಥಮ ಸರ್ಕಾರಿ ದಂತ ವೈದ್ಯ ಡಾ. ಗ್ಯಾನ್​ಕುಮಾರ್​ಗೆ ಅರ್ಹತಾ ಪ್ರಮಾಣ ಪತ್ರ ನೀಡುತ್ತಿರುವ ಐಐಎಂ ನಿದೇರ್ಶಕ ಡಾ. ಹೃಷಿಕೇಶ ಕೃಷ್ಣನ್​ ಹಾಗೂ ಪೊ.ವಾಸಂತಿ ಶ್ರೀನಿವಾಸನ್​.
Published on

ದೇವನಹಳ್ಳಿ: ಸರ್ಕಾರಿ ಪ್ರಾಯೋಜಕತ್ವದ ಇಂಡಿಯನ್​ ಇನ್ಸಿ$್ಟಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಬೆಂಗಳೂರಿನ ಒಂದು ವರ್ಷದ ಕೋರ್ಸ್​ ಯಶಸ್ವಿಯಾಗಿ ಪೂರೈಸಿ ಅರ್ಹತಾ ಪ್ರಮಾಣಪತ್ರ ಸ್ವೀಕರಿಸಿದ ರಾಜ್ಯದ ಪ್ರಥಮ ಸರ್ಕಾರಿ ದಂತ ವೈದ್ಯರಾಗಿ ಡಾ.ಗ್ಯಾನ್​ಕುಮಾರ್​ ಹೊರಹೊಮ್ಮಿದ್ದಾರೆ.

ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ದಂತ ವೈದ್ಯರಾಗಿರುವ ಡಾ.ಗ್ಯಾನ್​ಕುಮಾರ್​ ಪ್ರಸ್ತುತ ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದಂತ ವೈದ್ಯಕಿಯ ಕಾರ್ಯಾಕ್ರಮಾಧಿಕಾರಿಯಾಗಿದ್ದಾರೆ.

ರಾಜ್ಯದ ಸರ್ಕಾರಿ ವೈದ್ಯರಿಗೆ ವಿಶೇಷ ತರಬೇತಿ, ಉನ್ನತ ಶಿಕ್ಷಣ ನೀಡುವ ಸಲುವಾಗಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆ ಮಾಡಿಕೊಂಡ ವೈದ್ಯರು ಮತ್ತು ಆಡಳಿತ ವೈದ್ಯಾಧಿಕಾರಿಗಳಿಗೆ ಸರ್ಕಾರಿ ಪ್ರಾಯೋಜಕತ್ವದ ಐಐಎಂಬಿನಲ್ಲಿ ಒಂದು ವರ್ಷ ವಿಶೇಷ ಕೋರ್ಸ್​ ಗೆ ನಾರಾಯಣ ಹೆಲ್ತ್​ನ ದೇವಿಪ್ರಸಾದ್​ ಶೆಟ್ಟಿ , ಐಐಎಂ ನಿರ್ದೇಶಕ ಹೃಷಿಕೇಶ ಕೃಷ್ಣನ್​ ತಂಡ 15 ವೈದ್ಯರನ್ನು ಆಯ್ಕೆ ಮಾಡಿಕೊಂಡು ಒಂದು ಬ್ಯಾಚ್​ ಮಾಡಿ ತರಗತಿ ನಡೆಸಿತ್ತು. ಡಾ.ಗ್ಯಾನ್​ಕುಮಾರ್​ 15 ವೈದ್ಯರಲ್ಲಿ ಒಬ್ಬರಾಗಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ರಾಜ್ಯದ ಪ್ರಥಮ ದಂತ ವೈದ್ಯರೆನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net