

ಬೈಲಹೊಂಗಲ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಟ್ಕಾ ಬುಕ್ಕಿಂಗ್ ಮತ್ತು ಜೂಜಾಟದಲ್ಲಿ ತೊಡಗಿದ್ದ ಒಟ್ಟು ಏಳು ಜೂಜುಕೋರರನ್ನು ಭಾನುವಾರ ಬಂಧಿಸಿರುವ ಬೈಲಹೊಂಗಲ ಪೊಲೀಸರು, ಒಟ್ಟು 5,760 ರೂ.ಗಳನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.
ಸಮೀಪದ ಇಂಚಲ ಗ್ರಾಮದ ನಿವಾಸಿ ಶಿವಪ್ಪ ಅಪ್ಪಣ್ಣ ಕೊಳ್ಳಿ (62), ಹಣ್ಣಿಕೇರಿ ಗ್ರಾಮದ ಮಡಿವಾಳಪ್ಪ ನಿಂಗಪ್ಪ ಜೋಳದ (53), ತಲ್ಲೂರ ಗ್ರಾಮಸ್ಥ, ಬೈಲಹೊಂಗಲ ಕೆಎಸ್‌ಆರ್‌ಟಿಸಿ ಘಟಕದ ಕಾರ್ಯನಿರ್ವಾಹಕ ಭೋವಿ ಬಂಧಿತರು.
ಜೂಜಾಡುತ್ತಿದ್ದ ನಾಲ್ವರ ಬಂಧನ: ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದ ಬಸ್ ನಿಲ್ದಾಣ ಬಳಿ ಜೂಜಾಟ ಆಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ, ಅವರಿಂದ 1,250 ರೂ. ನಗದು, ಇಸ್ಪೀಟ್ ಎಲೆ ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.