ಜೂಜಾಡುತ್ತಿದ್ದ ಏಳು ಜನರ ಬಂಧನ

4manju5_WEb
ಜೂಜಾಟದಲ್ಲಿ ತೊಡಗಿದ್ದ ಏಳು ಜನರನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.
Published on

ಬೆಳಗಾವಿ: ತಾಲೂಕಿನ ದೇವಗಿರಿ ಗ್ರಾಮದ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿದ ಕಾಕತಿ ಠಾಣೆ ಪೊಲೀಸರು, ಶನಿವಾರ ರಾತ್ರಿ 7 ಜನರನ್ನು ಬಂಧಿಸಿದ್ದಾರೆ. ಅವರ ಬಳಿಯಿದ್ದ ಜೂಜಾಟದ 22,650 ರೂ. ನಗದು ವಶಪಡಿಸಿಕೊಂಡಿದ್ದಾರೆ.

ದೇವಗಿರಿ ಗ್ರಾಮದ ರಾಮಾ ಭೀಮಶಿ ಕುಂಬರಗಿ(30), ಯಲ್ಲೇಶ ಯಲ್ಲಪ್ಪ ಕುಶೆ(23), ಮುತ್ಯಾನಟ್ಟಿ ಗ್ರಾಮದ ಸಿದ್ರಾಯಿ ನಿಂಗಪ್ಪ ಹಾಲಬಾವಿ(42), ಬಂಬರಗಾ ಗ್ರಾಮದ ಜ್ಯೋತಿಭಾ ಕಲ್ಲಪ್ಪ ಕುಮ್ಮಾನಾಚೆ(27), ಕರೆಪ್ಪ ಶಾಮ ಗಿರೆಣ್ಣವರ(42), ನಿಂಗ್ಯಾನಟ್ಟಿ ಗ್ರಾಮದ ಶಿವಪ್ಪ ಬಾಪಣ್ಣ ನಾಯಕ (32) ಮತ್ತು ಸಿದ್ರಾಯಿ ಬಾಳಪ್ಪ ನಾಯಕ (31) ಬಂಧಿತ ವ್ಯಕ್ತಿಗಳು. ಗ್ರಾಮದ ಹೊರ ವಲಯದಲ್ಲಿ ಹಾಳು ಬಿದ್ದ ಸರ್ಕಾರಿ ಜನತಾ ಪ್ಲಾಟ್‌ನ ಬಳಿ ಶನಿವಾರ ತಡರಾತ್ರಿ ಜೂಜಾಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಗ್ರಾಮದ ಜೋಮಾ ಕಲ್ಲಪ್ಪ ಪಾಟೀಲ, ಬಂಬರಗಾ ಗ್ರಾಮದ ದಶರಥ ಲಕ್ಷ್ಮಣ ಗಿರೆಣ್ಣವರ, ವಿಶಾಲ ಜೋಡಪ್ಪ ಕುಮ್ಮಾನಾಚೆ ಹಾಗೂ ಕೇದನೂರು ಗ್ರಾಮದ ಸೋಮಾ ಯಲ್ಲಪ್ಪ ಕುಮ್ಮಾನಾಚೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಕತಿ ಠಾಣೆ ಪಿಐ ರಾಘವೇಂದ್ರ ಹಳ್ಳೂರ ನೇತೃತ್ವದಲ್ಲಿ ಪಿಎಸ್‌ಐ ಅವಿನಾಶ ಯರಗೊಪ್ಪ, ಆರ್. ಟಿ.ಲಕ್ಕನಗೌಡರ ಸಿಬ್ಬಂದಿ ಅರುಣ ಮೊಕಾಶಿ, ಪ್ರಕಾಶ ಬಲ್ಲಾಳ ಇನ್ನಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾಕತಿ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net