ಜೂಜಾಟ, ಆರು ಜನರ ಬಂಧನ

arrest
Published on

ಬೆಳಗಾವಿ: ತಾಲೂಕಿನ ಗೌಂಡವಾಡ ಗ್ರಾಮದ ಜೂಜು ಅಡ್ಡೆಯ ಮೇಲೆ ಬುಧವಾರ ತಡರಾತ್ರಿ ದಾಳಿ ನಡೆಸಿದ ಸಿಸಿಐಬಿ ಪೊಲೀಸರು ಐವರನ್ನು ಬಂಧಿಸಿದ್ದು, 24,700 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಬಿ.ಕೆ.ಕಂಗ್ರಾಳಿಯ ಸಂಗಮ ನಗರದ ಸುರೇಶ ಈರಪ್ಪ ಲಮಾಣಿ (37), ಮಲ್ಲೇಶ ಸತ್ತೆಪ್ಪ ಬುಡರಿ (35), ಸಂತೋಷ ಚಂದ್ರಕಾಂತ ಪಾಟೀಲ(31), ಹುಂಚೇನಟ್ಟಿಯ ಯಲ್ಲಪ್ಪ ಬಡಕಣ್ಣವರ(30), ಮುತ್ಯಾನಟ್ಟಿಯ ಗಂಗಾರಾಮ ಸಿದ್ದಪ್ಪ ಬಡಕಣ್ಣವರ(38) ಬಂಧಿತರು.

ಯಮನಾಪುರ ಗ್ರಾಮದ ಸಂಜು ಫಕೀರಾ ಗಸ್ತಿ ಮತ್ತು ಕುಮಾರ ನಾಯಿಕ ಎಂಬುವರು ಪರಾರಿಯಾಗಿದ್ದು ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಜೂಜಾಟ ಆಡುತ್ತಿದ್ದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ನಗರದ ಕಲೈಗಾರ ಗಲ್ಲಿಯ ಸಲ್ಮಾನ್ ಸಲೀಂ ಮುಲ್ಲಾ (27) ಬಂಧಿತ ವ್ಯಕ್ತಿ. ಆತನಿಂದ 2,620 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net