ಪಾವಗಡ ತಾಲೂಕಿನಲ್ಲಿ ಜೂಜಿನ ಮೋಜು ; ರಾಜಾರೋಷವಾಗಿ ದಂಧೆ

cards
Published on

ಪಾವಗಡ : ಕರೊನಾ ಭೀತಿಯಲ್ಲಿ ಜನ ಬದುಕುತ್ತಿದ್ದರೆ, ಬರಪೀಡಿತ ತಾಲೂಕಿನಲ್ಲಿ ಜೂಜು ಮತ್ತು ಮಟ್ಕಾ ಅವ್ಯಾಹತವಾಗಿದೆ.

ಈ ದಂಧೆಯೇ ಕೆಲವರ ವೃತ್ತಿಯಾಗಿದ್ದು, ಬಡಕುಟುಂಬಗಳು ಬೀದಿಗೆ ಬೀಳುತ್ತಿವೆ. ತಾಲೂಕಿನ 18 ಸ್ಥಳಗಳಲ್ಲಿ ದಂಧೆ ನಡೆಯುತ್ತಿದೆ. ಅರಸೀಕೆರೆ ಠಾಣಾ ವ್ಯಾಪ್ತಿಯ ಪೆನ್ನೊಬನಹಳ್ಳಿ, ಮಲ್ಲಮ್ಮನಹಳ್ಳಿ, ಮಂಗಳವಾಡದ ವಾವಿನ ತೋಪಿನಲ್ಲಿ ಆನ್‌ಲೈನ್ ಜೂಜಿನಲ್ಲಿ ಲಕ್ಷಾಂತರ ರೂಪಾಯಿ ಆದಾಯ ನಡೆಯುತ್ತಿದೆ. ವೈ.ಎನ್.ಹೊಸಕೋಟೆ ಠಾಣಾ ವ್ಯಾಪ್ತಿಯ ನೀಲಮ್ಮನಹಳ್ಳಿ, ಹೊಸದುರ್ಗ, ಜಾಲೋಡು, ಯರ‌್ರಮ್ಮನಹಳ್ಳಿ, ಪಾವಗಡ ಠಾಣೆ ವ್ಯಾಪ್ತಿಯ ಜಾಜುರಾಯನಹಳ್ಳಿ, ವಿರುಪಸಮುದ್ರ, ಮುರಾರಾಯನಹಳ್ಳಿ ಹಾಗೂ ಪಟ್ಟಣದ ಸಮೀಪದ ತುಮಕೂರು ರಸ್ತೆಯ ರೆಸಾರ್ಟ್ ಹಿಂಭಾಗ, ಶನಿಮಹಾತ್ಮ ದೇವಸ್ಥಾನದ ಪಕ್ಕದ ಕಟ್ಟಡದಲ್ಲಿ ಹಾಡಹಗಲೇ ಜೂಜು ಅಡ್ಡೆಗಳು ನಡೆಯುತ್ತಿವೆೆ.

ವಿಪರ್ಯಾಸವೆಂದರೆ ದಂಧೆ ನಡೆಸುವವರು ಕೋಟ್ಯಧಿಪತಿಗಳಾಗಿದ್ದಾರೆ. ಆಡುವವರು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ದಂಧೆಗೆ ಪೊಲೀಸರ ಸಾಥ್ ಇದೆಯೇ ಎನ್ನುವ ಅನುವಾನ ಕಾಡುತ್ತಿದೆ. ಒಂದು ವೇಳೆ ರೈಡ್ ವಾಡಲು ಪೊಲೀಸ್ ತಂಡ ಹೋದರೆ, ಕೆಲ ಸಿಬ್ಬಂದಿಯಿಂದಲೇ ವಾಹಿತಿ ಸಿಗುತ್ತಿದೆ ಎಂಬ ಆರೋಪವೂ ಇದೆ. ಪಟ್ಟಣದ ಮಟ್ಕಾ ಕಿಂಗ್‌ಪಿನ್ ಹಾಗೂ ಹಲವರ ಹೆಸರು ದಾಖಲಿಸಿ ಮಂಜುನಾಥ್ ಎಂಬುವವರು ಸಿಎಂಗೆ ಪತ್ರ ಬರೆದು ದೂರಿದ್ದಾರೆ.

ಜೂಜು ಮತ್ತು ಮಟ್ಕಾ ದಂಧೆ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈ ಬಗ್ಗೆ ವಿಶೇಷ ತಂಡ ರಚಿಸಿ ದಾಳಿಗೆ ಸಿದ್ಧತೆ ನಡೆಯುತ್ತಿದೆ. ನಾಗರಾಜು ಪಿಎಸ್‌ಐ, ಪಾವಗಡ ಠಾಣೆ ಪೊಲೀಸರಿಗೆ ಕಮಿಷನ್ ಕೊಟ್ಟು ಬಹಿರಂಗವಾಗಿ ಆಟ ಆಡಿಸುತ್ತಿದ್ದೇವೆ ಎಂದು ಮಟ್ಕಾ ಕಿಂಗ್‌ಪಿನ್‌ಗಳೇ ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಕಾವಲಗೇರಿ ರಾವಾಂಜಿನಪ್ಪ ತಾಲೂಕು ಅಧ್ಯಕ್ಷ, ಶ್ರೀರಾಮಸೇನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net