ಜೂಜಾಟದಲ್ಲಿ ತೊಡಗಿದ್ದ ನಾಲ್ವರು ಅಂದರ್

arrest
Published on

ಬೆಳಗಾವಿ: ನಗರದ ಜೂಜು ಅಡ್ಡೆಗಳ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಭಾನುವಾರ ನಾಲ್ವರನ್ನು ಬಂಧಿಸಿ, 57 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಾಕತಿವೇಸ್‌ನ ಅಬ್ದುಲ್‌ಖಾದರ ತಾರೀಹಾಳಕ (42), ಸಮೀರಖಾನ ಪಠಾಣ(45), ವಾಸಿಂ ಚಾಂದವಾಲೆ (38), ಶಫಿ ಮೊಹ್ಮದ್ ದರಸೂಲ್(42) ಬಂಧಿತರು.

ಜೂಜಾಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಮಾರ್ಕೆಟ್ ಠಾಣೆ ಇನ್‌ಸ್ಪೆಕ್ಟರ್ ಸಂಗಮೇಶ ಶಿವಯೋಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net