ಜೂಜಾಟ, 9 ಜನರ ಬಂಧನ

arrest
Published on

ಬೆಳಗಾವಿ: ನಗರದ ಶಹಾಪುರ ಹಟ್ಟಿಹೊಳಿಗಲ್ಲಿ, ಭಂಗಿಬೋಳದ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಬುಧವಾರ ದಾಳಿ ನಡೆಸಿದ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿ, ಆತನಿಂದ 8,950 ರೂ. ನಗದು ವಶಪಡಿಸಿಕೊಂಡಿದ್ದಾರೆ. ನಗರದ ಹಟ್ಟಿಹೊಳಿ ಗಲ್ಲಿಯ ಸುಭಾಷ ಟಕ್ಕಪ್ಪ ಬೆಕವಾಡ (52) ಬಂಧಿತ ವ್ಯಕ್ತಿ. ಶಹಾಪುರ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.

ಕೊಕಟನೂರ: ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿರುವ ವೇಳೆ ಪೊಲೀಸರು ದಾಳಿ ನಡೆಸಿ ಏಂಟು ಜನರನ್ನು ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಲಗಬಾಳ ಗ್ರಾಮದ ಅಣ್ಣಾಸಾಬ ದುರ್ಗಿ, ಮಹೇಶ ದುರ್ಗಿ, ಲಕ್ಷ್ಮಣ ದುರ್ಗಿ, ಪುಂಡಲೀಕ ಚೌಗಲಾ, ರಾಜು ಶಿಂಧೆ, ಜ್ಯೋತಿಭಾ ಸೂರ್ಯವಂಶಿ, ಮೆಹಬೂಬ ಕುರಣಿ, ರಾಮು ದುರ್ಗಿ ಬಂಧಿತರು. ಬಂಧಿತರಿಂದ 2,250 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net