ಜೂಜಾಡುತ್ತಿದ್ದವರ ಬಂಧನ

Arrest Kaidhi
Published on

ಗೋಕಾಕ: ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಐವರನ್ನು ಗೋಕಾಕ ನಗರ ಠಾಣೆ ಪೋಲಿಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಪ್ರಶಾಂತ ಜೋಳದ, ಪ್ರವೀಣ ರಾಠೋಡ, ವಿಠಲ ಮಾಲದಾರ, ಸತೀಶ ಹಟ್ಟಿಹೊಳಿ, ರಾಜು ವರದಾಯಿ ಬಂಧಿತರು.

ನಗರದ ತಂಬಾಕೆ ಜಿನ್ನಿಂಗ್ ಫ್ಯಾಕ್ಟರಿ ಬಳಿ ಇಸ್ಪೀಟ್ ಆಡುತ್ತಿದ್ದರು. ಬಂಧಿತರಿಂದ ಇಸ್ಪೀಟ್ ಎಲೆಗಳು ಹಾಗೂ 8120 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net