

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿ 13 ಜೂಜುಕೋರರನ್ನು ಬಂಧಿಸಿರುವ ಚಾಮರಾಜನಗರ ವಿಶೇಷ ವಿಭಾಗದ ಪೊಲೀಸರು, ಪಣಕ್ಕಿಟ್ಟಿದ್ದ 2.67 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮದ ನಾಯಕ ಸಮುದಾಯ ಭವನದ ಹಿಂಭಾಗದ ಸಾರ್ವಜನಿಕರ ಸ್ಥಳದಲ್ಲಿ ಇತ್ತೀಚೆಗೆ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನ ಮೇರೆಗೆ ಚಾಮರಾಜನಗರ ವಿಶೇಷ ವಿಭಾಗದ ಪ್ರಭಾರ ಇನ್‌ಸ್ಪೆಕ್ಟರ್ ಸಿ.ಪಿ.ನವೀನ್ ನೇತೃತ್ವದ ತಂಡ ದಾಳಿ ಮಾಡಿ 13 ಜೂಜುಕೋರನ್ನು ಬಂಧಿಸಿ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.