ಕಾವ್ಯ ಅಧ್ಯಯನದಿಂದ ಜೀವನ ಮೌಲ್ಯ :ಜ್ಯೋತಿ ಕುಮಾರಿ ಅನಿಸಿಕೆ

02
Published on

ಮುಳ್ಳೇರಿಯ: ಕಾವ್ಯಗಳನ್ನು ತಿಳಿಯುವ ಮೂಲಕ ಜೀವನ ಮೌಲ್ಯಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಮುಖರಾದ ಜ್ಯೋತಿ ಕುಮಾರಿ ಹೇಳಿದರು.

ಕಾರಡ್ಕ ಜಿವಿಎಚ್‌ಎಸ್‌ಎಸ್ ಶಾಲೆಯಲ್ಲಿ ಗಮಕ ಕಲಾ ಪರಿಷತ್ ಕಾಸರಗೋಡು ಟಕ, ಸಿರಿಗನ್ನಡ ವೇದಿಕೆಗಳ ಸಹಯೋಗದಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಟಿಎ ಅಧ್ಯಕ್ಷ ಸುರೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಗಮಕ ಕಲಾ ಪರಿಷತ್ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸಂಜೀವ ಎಂ ಶುಭಹಾರೈಸಿದರು.

ನೌಕರ ಸಂಘದ ಕಾರ್ಯದರ್ಶಿ ಡಾ.ಅಶೋಕ, ಯಕ್ಷಗಾನ ಅರ್ಥಧಾರಿ ಶ್ಯಾಮ ಆಳ್ವ ಕಡಾರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭೂಮಿಕಾ ಸ್ವಾಗತಿಸಿದರು. ದೇವಿಕಾ ಪ್ರಾರ್ಥಿಸಿದರು. ಸಿರಿಗನ್ನಡ ವೇದಿಕೆ ಅಧ್ಯಕ್ಷ ವಿ.ಬಿ.ಕುಳಮರ್ವ ಪ್ರಸ್ತಾವಿಸಿದರು. ಶಿಕ್ಷಕ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಅಭೀಕ್ಷಾ ವಂದಿಸಿದರು. ತೊರವೆ ರಾಮಾಯಣದ ಭಾರ್ಗವ ಗರ್ವಭಂಗ ಕಥಾ ಭಾಗವನ್ನು ಮಾಧವ ಭಟ್ ಪಣಿಯೆ ವಾಚಿಸಿದರು. ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ವ್ಯಾಖ್ಯಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net