

ಕಾಸರಗೋಡು: ಗಮಕ ಕಲಾ ಪರಿಷತ್ ಗಡಿನಾಡ ಘಟಕ ಕಾಸರಗೋಡು, ಸಿರಿಗನ್ನಡ ಸಾಂಸ್ಕೃತಿಕ ವೇದಿಕೆ ಗಡಿನಾಡ ಘಟಕ ಕಾಸರಗೋಡು, ತರಂಗಿಣಿ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಸುಬ್ಬಯಕಟ್ಟೆ, ಕೈರಲಿ ಕುಟುಂಬಶ್ರೀ ಘಟಕ ಸುಬ್ಬಯಕಟ್ಟೆ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ ಸುಬ್ಬಯ್ಯಕಟ್ಟೆಯಲ್ಲಿ ಇತ್ತೀಚೆಗೆ ಜರುಗಿತು.
ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಅವರ ಪುತ್ರ ಡಾ.ಪ್ರಸನ್ನ ರೈ ಸಮಾರಂಭ ಉದ್ಘಾಟಿಸಿದರು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ತರಂಗಿಣಿ ಕ್ಲಬ್ ಗೌರವಾಧ್ಯಕ್ಷ ಅಶೋಕ ಭಂಡಾರಿ, ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು ಮುಖ್ಯ ಅತಿಥಿಗಳಾಗಿದ್ದರು.
ಹಿರಿಯ ಕೃಷಿಕ ಬಿ.ಕೆ.ಖಾದರ್ ಹಾಜಿ, ಚೇವಾರು ಬಾಯಾಡಿ ವೆಂಕಟರಮಣ ಭಟ್ ಅವರನ್ನು ಗೌರವಿಸಲಾಯಿತು.
ಮರುವಳ ನಾರಾಯಣ ಭಟ್, ಪ್ರಮುಖರಾದ ರಾಮಕೃಷ್ಣ ಭಂಡಾರಿ, ಲತೀಫ್ ಬಿ.ಎ ಮೊದಲಾದವರು ಉಪಸ್ಥಿತರಿದ್ದರು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ವಿ.ಬಿ.ಕುಳಮರ್ವ ಪ್ರಾಸ್ತಾಪಿಸಿದರು. ಶಿವಪ್ರಸಾದ ಶೆಟ್ಟಿ ಸ್ವಾಗತಿಸಿದರು. ಎಸ್.ಕೆ.ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಗ್ರಾಪಂ ಮಾಜಿ ಸದಸ್ಯೆ ಪುಷ್ಪಾ ಕಮಲಾಕ್ಷ ವಂದಿಸಿದರು. ವಿಷ್ಣು ಶರ್ಮ ನೂಜಿಲ, ಡಾ.ಶ್ರೀಶಕುಮಾರ್ ಪಂಚಿತ್ತಡ್ಕ ಅವರಿಂದ ರಾಮಾಯಣದ ಕಥಾಭಾಗದ ಗಮಕ ನಡೆಯಿತು.