

ಮಂಡ್ಯ: ನಗರದ ಕರ್ನಾಟಕ ಸಂಘದ ಆವರಣದಲ್ಲಿ ಡಿ.22ರಿಂದ 29ರವರೆಗೆ ರಾಮಾಯಣ ದರ್ಶನಂ ಗಮಕ ವಾಚನ ಸಪ್ತಾಹ, ರಾಮಾಯಣ ದರ್ಶನಂ ವಿಭಿನ್ನ ಆಯಾಮಗಳು ವಿಷಯ ಕುರಿತು ವಿಚಾರಗೋಷ್ಠಿ ಮತ್ತು ಕುವೆಂಪು ಜನ್ಮೋತ್ಸವ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ತಿಳಿಸಿದರು.
ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6ರಿಂದ 8ರವರೆಗೆ ಗಮಕ ವಾಚನ ನಡೆಯಲಿದೆ. 22ರಂದು ಸಂಜೆ 6 ಗಂಟೆಗೆ ಸಾಹಿತಿ ತೈಲೂರು ವೆಂಕಟಕೃಷ್ಣ ಸಮಾರಂಭ ಉದ್ಘಾಟಿಸುವರು. ಪ್ರಸಿದ್ಧ ಗಮಕಿ ಕೃ.ರಾಮಚಂದ್ರ, ಗಮಕಿ ವಿದ್ಯಾಶಂಕರ್ ವಾಚನ ಮಾಡುವರು. ಸಾಹಿತಿ ಡಾ.ಮ.ರಾಮಕೃಷ್ಣ ವ್ಯಾಖ್ಯಾನ ಮಾಡುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
26ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಸಾಹಿತಿ ಡಾ.ರಾಗೌ ಉದ್ಘಾಟಿಸುವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ವಿಜಯಕುಮಾರಿ ಕರಿಕಲ್ ಅಧ್ಯಕ್ಷತೆ ವಹಿಸುವರು. 27ರಂದು ಬೆಳಗ್ಗೆ 11ಕ್ಕೆ ವಿಚಾರ ಸಂಕಿರಣವಿರಲಿದೆ ಎಂದರು.
ಸಂಘದ ನಿರ್ದೇಶಕ ಸೋಮಶೇಖರ್ ಇದ್ದರು.