ಪಿತ್ತಾಶಯದ ಹರಳು ತಪಾಸಣೆ ಶಿಬಿರ ಇಂದಿನಿಂದ

free-medical-camp
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ದೇಹದಲ್ಲಿನ ಪಿತ್ತಾಶಯದ ಹರಳುಗಳಿಗೆ (ಕೊಲಿಲಿಥಿಯಾಸಿಸ್) ಸಂಬಂಧಿಸಿದ ಮತ್ತು ಕಾಮಾಲೆ ರೋಗಕ್ಕೆ ವಿಶೇಷ ಸಲಹಾ ಹಾಗೂ ತಪಾಸಣಾ ಶಿಬಿರವನ್ನು ಆ. 6ರಿಂದ 10ರವರೆಗೆ ಏರ್ಪಡಿಸಲಾಗಿದೆ.
ಪದೇ ಪದೆ ತೀವ್ರವಾದ ಹೊಟ್ಟೆ ಬಲಭಾಗದಲ್ಲಿಯ ನೋವಿನ ಜತೆ ಬೆನ್ನುನೋವು, ಪಕ್ಕೆನೋವು, ವಾಂತಿ, ಎದೆಉರಿ, ಕಾಮಾಲೆಯ ಹಿನ್ನೆಲೆಯುಳ್ಳ ಮತ್ತು ಪಿತ್ತಕೋಶದ ಹರಳುಗಳು, ಕಾಮಣಿ ಮುಂತಾದ ತೊಂದರೆಗಳನ್ನು ಹೊಂದಿರುವ ರೋಗಿಗಳಿಗೆ ಕಾಯಚಿಕಿತ್ಸಾ ವಿಭಾಗದ ವತಿಯಿಂದ ವಿಶೇಷ ಸಲಹಾ. ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ. ಆಸಕ್ತರು ಶಿಬಿರದ ಸದುಪಯೋಗ ಪಡೆಯಬೇಕೆಂದು ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net