

ಆಲ್ದೂರು: ಪಟ್ಟಣದ ಗಾಳಿಗಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದ 36ನೇ ವರ್ಷದ ವಿದ್ಯಾಗಣಪತಿಯನ್ನು ಸೋಮವಾರ ವಿಸರ್ಜಿಸಲಾಯಿತು.
ಅಲಂಕೃತವಾದ ಸಾರೋಟಿನಲ್ಲಿ ವಿದ್ಯಾಗಣಪತಿಯನ್ನು ಕೂರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಗಾಳಿಗಂಡಿ ಮೂಲಕ ಸಾಗಿ ವಿವಿಧ ಮುಖ್ಯರಸ್ತೆಗಳಲ್ಲಿ ಸಾಗಿ ಬೀರಂಜಿ ಹಳ್ಳದಲ್ಲಿ ವಿಸರ್ಜಿಸಲಾಯಿತು.
ಡ್ರಮ್‌ಸಟ್ ನಾದಕ್ಕೆ ಮಕ್ಕಳು, ಮಹಿಳೆಯರು ಹೆಜ್ಜೆಹಾಕಿ ಸಂಭ್ರಮಿಸಿದರು. ಗಾಳಿಗಂಡಿ ಗ್ರಾಮವನ್ನು ಕೇಸರಿ ಬಂಟಿಗ್ಸ್‌ಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಸುಂದರ ರಾಮನ ಮೂರ್ತಿ ಸಾರ್ವಜನಿಕರ ಗಮನ ಸೆಳೆಯಿತು. ಸಿಡಿ ಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು. ಪಟ್ಟಣದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಂತೋಷ್,ಉಪಾಧ್ಯಕ್ಷ ಸುರೇಶ್.ಕೆ.ಡಿ,ಕಾರ್ಯದರ್ಶಿ ವಸಂತ್, ಸಹಕಾರ್ಯದರ್ಶಿ ವೈ.ಲಾ ರವಿ, ಖಜಾಂಚಿ ಸೂರಜ್,ಗ್ರಾಪಂ ಸದಸ್ಯ ರಾಜು,ರಮೇಶ್ ಆಚಾರ್ಯ ಮತ್ತಿತರರಿದ್ದರು.