ಗಳಗನಾಥರು, ರಾಜಪುರೋಹಿತರ ಸೇವೆ ಸ್ಮರಣೀಯ

22 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಯಾರು ಸಾಹಿತ್ಯ ಓದುತ್ತಾರೆ ಅದು ಅವರ ಹಿತ ಕಾಪಾಡುತ್ತದೆ. ಇದಕ್ಕಾಗಿ ಕೆಲವರು ಇಡೀ ಜೀವನ ಮುಡಿಪಾಗಿಟ್ಟವರಿದ್ದಾರೆ. ಅಂತಹವರಲ್ಲಿ ಗಳಗನಾಥರು ಮತ್ತು ನಾ.ಶ್ರೀ. ರಾಜಪುರೋಹಿತರು ಮೊದಲಿಗರು ಎಂದು ಹಿರಿಯ ಪ್ರಕಾಶಕ ರಮಾಕಾಂತ ಜೋಶಿ ಹೆಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗಳಗನಾಥ ಹಾಗೂ ನಾ.ಶ್ರೀ ರಾಜಪುರೋಹಿತ ಸ್ಮರಣಾರ್ಥ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗಳಗನಾಥರು ಕಾದಂಬರಿಕಾರರಾಗಿ, ನಾ.ಶ್ರೀ. ರಾಜಪುರೋಹಿತರು ಇತಿಹಾಸ ಸಂಶೋಧಕರಾಗಿ ಕನ್ನಡಕ್ಕೆ ಅರ್ಹನಿಶಿ ದುಡಿದರು. ಇವರಿಬ್ಬರು ಕನ್ನಡ ಉದ್ಧರಿಸಿದ ಮಹಾನುಭಾವರು. ಮುಂದಿನ ಜನಾಂಗದ ಯುವಕರಿಗೆ ಕನ್ನಡದ ಬಗ್ಗೆ ಅಭಿಮಾನ ಬೆಳೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಬೇಕು ಎಂದರು.

ಸುಧೀಂದ್ರ ಕುಲಕರ್ಣಿ ಮಾತನಾಡಿದರು. ಗಳಗನಾಥರ ಬದುಕು-ಬರಹ ಕುರಿತು ಹರ್ಷ ಡಂಬಳ, ನಾ. ಶ್ರೀ. ರಾಜಪುರರೋಹಿತ ಕುರಿತು ಡಾ. ಗುರುಪಾದ ಮರಿಗುದ್ದಿ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಶ್ರೀನಿವಾಸ ವಾಡಪ್ಪಿ, ಗಿರೀಶ ಪದಕಿ, ಇತರರು ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಪ್ರೊ. ದುಷ್ಯಂತ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಡಾ. ಸಂಜೀವ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net