ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ

04GDG03
Published on

ಗಜೇಂದ್ರಗಡ: ಶರಣಬಸವೇಶ್ವರ ಜಾತ್ರಾ ಮಹೊತ್ಸವ ಕೊನೆಯ  ದಿನ ಉತ್ಸಾಹದಿಂದ ಮುಶಿಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ರಸ ಮಂಜರಿಯಲ್ಲಿ ಸಂಭ್ರಮಿಸಿದ ಜನ ಬುಧವಾರ ರಾತ್ರಿಯೂ ಕುಣಿದು ಕುಪ್ಪಳಿಸಿದರು. ತಾರಾ ಕಲಾವಿದರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಜ್ಜೆ ಹಾಕಿ ಬುಧವಾರ ಬೆಳಗಿನ ಜಾವದ ತನಕವೂ ಸಂಭ್ರಮ ಪಟ್ಟರು. ಕಲಾಸಿಂಚನ ಮೆಲೋಡಿಸಾ ಕಲಾ ತಂಡದಿಂದ ಹಾಸ್ಯ ಸಂಗೀತ ಸಿಂಚನ ಬುಧವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದ ಮೂಲಕ ಜಾತ್ರಾ ಮಹೋತ್ಸಕ್ಕೆ  ವರ್ಣರಂಜಿತವಾಗಿ ತೆರೆಬಿದ್ದಿತು.

ಹೆಸರಾಂತ ಕಲಾವಿದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ, ಸುರೇಶ ಇಂಚಗೇರಿ, ಮಾಲಾಶ್ರೀ ಗವನಾಳೆ, ಡಿಕೆಡಿ ಪೂಜಾ, ಪ್ರೀಯಾ ಹಾಗೂ ಅಂಕಿತಾ ತಂಡದವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಕ್ಕೆ ಜನ ಮನಸೋತರು. ತಾವಿದ್ದ  ಜಾಗದಲ್ಲಿಯೇ ಕುಣಿದರು.

ರಜಮಂಜರಿ ಕಾರ್ಯಕ್ರಮವನ್ನು,  ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ ಉದ್ಘಾಟಿಸಿದರು. ಪ್ಯಾಟಿಯ ಧರ್ಮರ ಮಠದ ಸಂಕ್ರಪ್ಪಜ್ಜನವರು ಸಾನಿಧ್ಯವಹಿಸಿದ್ದರು. ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಚಂದಪ್ಪ  ಗುಡದೂರ, ಅವಿನಾಶ ಸಾಲಮನಿ, ಹಣಮಂತ ಬೇವಿನಮರದ ಮೌನೇಶ ಅಕ್ಕಸಾಲಿಗರ, ಚಂದ್ರಶೇಖರ ಬೆವಿನಮರದ, ಬಸವರಾಜ ಕೌಜಗೇರಿ, ಮಲ್ಲಿಕಾರ್ಜುನ ಬೇವಿನಮರದ, ಮಹೇಶ ಮೇಟಿ, ರಾಘು ಪತ್ತಾರ, ಪ್ರವೀಣ ಕರ್ಣಿ, ಬಸವರಾಜ ಗುಡದೂರ, ಅಂದಪ್ಪ ಹಾಲಕೇರಿ, ಅಂದಪ್ಪ ತೊಂಡಿಹಾಳ, ಈರಣ್ಣ ಸೂಡಿ, ಶರಣಪ್ಪ ದೊಡ್ಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net