ಕಾರಿನಲ್ಲೇ 25 ದಿನ ಕಳೆದ ಪುತ್ತೂರು ಅಡಕೆ ವ್ಯಾಪಾರಿಗಳಿಗೆ ಗುಜರಾತ್ ಸರ್ಕಾರ ಆಶ್ರಯ

putthur
Published on

ಪುತ್ತೂರು: ಲಾಕ್‌ಡೌನ್‌ನಿಂದಾಗಿ ಗುಜರಾತ್‌ನಲ್ಲಿ ಸಿಲುಕಿಕೊಂಡು ಕಾರಿನಲ್ಲೇ 25 ದಿನ ಕಳೆದಿರುವ ಪುತ್ತೂರಿನ ಅಡಕೆ ವ್ಯಾಪಾರಿಗಳಿಗೆ ಅಲ್ಲಿನ ಸರ್ಕಾರ ಆಶ್ರಯ ನೀಡಿದೆ.

ಪುತ್ತೂರು ತಾಲೂಕು ಸಾಮೆತ್ತಡ್ಕ ನಿವಾಸಿ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಅವರು ಲಾಕ್‌ಡೌನ್ ಘೋಷಣೆಯಾಗುವ ಎರಡು ದಿನ ಮೊದಲು ರಾಜ್‌ಕೋಟ್‌ನಿಂದ ಹೊರಟಿದ್ದರು. ಮಹಾರಾಷ್ಟ್ರ ಗಡಿ ಸಮೀಪದ ಗುಜರಾತಿನ ವಲ್ಸಾಡ್ ಜಿಲ್ಲೆಯ ಬಿಲಾಡ್ ತಾಲೂಕಿನ ಅಂಬರ್‌ಗಾವ್ ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಸಿಲುಕಿದ್ದ ಅವರಿಗೆ ಆಶ್ರಯ, ಆಹಾರ ಒದಗಿಸುವಂತೆ ಕೋರಿ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪತ್ರ ಬರೆದಿದ್ದರು.

ಗುಜರಾತ್ ಸರ್ಕಾರ ವಲ್ಸಾಡ್ ಜಿಲ್ಲೆಯ ಜಿಲ್ಲಾಧಿಕಾರಿಗೆ ಈ ಪತ್ರ ವರ್ಗಾಯಿಸಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಶಿಕ್ ಹುಸೈನ್ ಹಾಗೂ ಮೊಹಮ್ಮದ್ ತಾಕೀನ್ ಅವರ ಆರೋಗ್ಯ ತಪಾಸಣೆ ನಡೆಸಿ ಅಂಬರ್‌ಗಾವ್ ಸಮೀಪದ ಉದ್ಯಮಿಯೋರ್ವರ ಫ್ಲಾೃಟ್‌ನಲ್ಲಿ ವಸತಿ ಸೌಕರ್ಯ ನೀಡಿದೆ.

25 ದಿನ ಕಾರಿನಲ್ಲೇ ವಾಸವಾಗಿದ್ದ ನಮಗೆ ಈಗ ವಸತಿ, ಆಹಾರ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಕರೊನಾ ನೆಗೆಟಿವ್ ವರದಿ ಬಂದಿದೆ. ಲಾಕ್‌ಡೌನ್ ಮುಗಿದ ಬಳಿಕ ಇಲ್ಲಿಂದ ತೆರಳುವಂತೆ ಸೂಚನೆ ನೀಡಲಾಗಿದೆ.

- ಆಶಿಕ್ ಹುಸೈನ್, ಪುತ್ತೂರು ತಾಲೂಕು ಸಾಮೆತ್ತಡ್ಕ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net