

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮá-ಖ ಆಕರ್ಷಣೆ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಭಾನುವಾರ ಅರಮನೆ ಅಂಗಳದಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದವು.
ಯಶಸ್ವಿಯಾಗಿ ಅಂಬಾರಿ ಹೊತ್ತ ಅಭಿಮನ್ಯು ಹಾಗೂ ಇನ್ನಿತರ ಆನೆಗಳಿಗೆ ಭಾನುವಾರ ಬೆಳಗ್ಗೆಯೇ ಸ್ನಾನ ಮಾಡಿಸಲಾಯಿತು. ನಂತರ ಬೆಲ್ಲ, ಕುಸá-ರೆ, ಸೊಪ್ಪು, ಬೇಯಿಸಿದ ಧಾನ್ಯ ನೀಡಲಾಯಿತು. ವಿಶೇಷವಾಗಿ ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಮೆರವಣಿಗೆ ಮುಗಿದು ಅರಮನೆಗೆ ಹಿಂದಿರುಗಿದಾಗಲೇ ಶನಿವಾರ ರಾತ್ರಿಯೇ ಬಿಸಿ ನೀರು ಸ್ನಾನ ಮಾಡಿಸಲಾಗಿತ್ತು. ಮತ್ತೆ ಭಾನುವಾರವೂ ತಣ್ಣೀರು ಸ್ನಾನ ಮಾಡಿಸಿ ವಿಶ್ರಾಂತಿ ನೀಡಲಾಗಿತ್ತು. ಅಭಿಮನ್ಯು ಪಕ್ಕದಲ್ಲೇ ವರಲಕ್ಷ್ಮೀ ಆನೆಯೂ ವಿಶ್ರಾಂತಿಗೆ ಜಾರಿತು.
ಪ್ರವಾಸಿಗರ ದಂಡು!: ಅಭಿಮನ್ಯು ಸೇರಿ ದಸರಾ ಆನೆಗಳನ್ನು ವೀಕ್ಷಿಸಲು ಸಾಕಷ್ಟು ಜನರು ಆಗಮಿಸಿದ್ದರು. ಕೆಲವರು ಆನೆಯ ಬಳಿ ನಿಂತು ಫೋಟೋ ತೆಗೆಸಿಕೊಂಡರು. ಆನೆ ಬಗ್ಗೆ ತಮ್ಮಲ್ಲಿದ್ದ ಕುತೂಹಲದ ಸಂಗತಿಗಳನ್ನು ಮಾವುತರೊಂದಿಗೆ ರ್ಚಚಿಸಿ ಪರಿಹಾರ ಕಂಡುಕೊಂಡರು. ಕ್ಯಾಪ್ಟನ್ ಅಭಿಮನ್ಯು ಹಾಗೂ ಭೀಮಾ, ಮಹೇಂದ್ರ, ಹೊಸ ಆನೆ ಏಕಲವ್ಯ ಶೆಡ್ಗಳ ಬಳಿಯೇ ಹೆಚ್ಚು ಜನ ಮತ್ತು ಮಕ್ಕಳá- ಸೇರಿದ್ದರು. ರಾಜವಂಶಸ್ಥೆ ವಿಶಾಲಾಕ್ಷಮ್ಮ ಪುತ್ರಿ ಶ್ರುತಿ ಆನೆ ಶೆಡ್ಗಳ ಬಳಿಗೆ ಆಗಮಿಸಿ ರೋಹಿತ ಮತ್ತು ಲಕ್ಷ್ಮೀ ಆನೆಗೆ ಆರೈಕೆ ಮಾಡಿದರು.
ಗೆಜ್ಜೆ, ಆಭರಣ ವಾಪಸ್: ಮೆರವಣಿಗೆಗೆ ರಾಜಪೋಷಾಕಿನೊಂದಿಗೆ ಸಿಂಗಾರಗೊಂಡಿದ್ದ ಆನೆಗಳ ಮೇಲಿದ್ದ ವಸ್ತುಗಳು, ಗೆಜ್ಜೆ, ಆಭರಣ ಇತ್ಯಾದಿಗಳನ್ನು ಅರಮನೆ ಮಂಡಳಿ ಕಚೇರಿಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತ ವಾಗಿ ಇಡಲಾಯಿತು. ಅರಮನೆ ಮಂಡಳಿಯಿಂದ ನೀಡಲಾಗಿದ್ದ ಈ ಆಭರಣ, ಸಮವಸ್ತ್ರಗಳನ್ನು ಬನ್ನಿಮಂಟಪದಿಂದ ವಾಪಸ್ ಆದಾಗ ಶನಿವಾರ ರಾತ್ರಿಯೇ ತೆಗೆದು, ಕೋಡಿಸೋಮೇಶ್ವರ ದೇವಸ್ಥಾನದಲ್ಲಿರುವ ಕೊಠಡಿಯಲ್ಲಿ ಇರಿಸಲಾಗಿತ್ತು.
ಮರಳಿ ಕಾಡಿಗೆ: ಜಂಬೂಸವಾರಿಯನ್ನು ಯಶಸ್ವಿ ಗೊಳಿಸಿದ ಮಾವುತರು ಮತ್ತು ಕಾವಾಡಿಗಳು ಅ.14ರಂದು ತಮ್ಮ ಕುಟುಂಬ ಹಾಗೂ ಆನೆಗಳೊಂದಿಗೆ ಕಾಡಿನತ್ತ ಪಯಣ ಬೆಳೆಸಲಿದ್ದಾರೆ. ಬೆಳಗ್ಗೆ 11.45 ರಿಂದ ಮಧ್ಯಾಹ್ನ 12.30ರ ನಡುವೆ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಪೂಜೆ ನಡೆಯಲಿದೆ. ಬಳಿಕ ಲಾರಿಗಳ ಮೂಲಕ ಆನೆಗಳನ್ನು ಕ್ಯಾಂಪ್ಗಳಿಗೆ ಕಳುಹಿಸಲಾಗುತ್ತದೆ.
ದಸರಾ ಜಂಬೂ ಸವಾರಿ ಮೆರವಣಿಗೆಯ ಎಲ್ಲ ಯಶಸ್ಸು ಕ್ಯಾಪ್ಟನ್ ಅಭಿಮನ್ಯು ಮತ್ತು ತಂಡಕ್ಕೆ ಸಲ್ಲಬೇಕು. ಅಭಿಮನ್ಯು ನಮ್ಮನ್ನು ಮತ್ತೊಮ್ಮೆ ಗೆಲ್ಲಿಸಿದ್ದಾನೆ. ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಗಜಪಡೆಯನ್ನು ಸೋಮವಾರ ಲಾರಿಗಳ ಮೂಲಕ ಕ್ಯಾಂಪ್ಗಳಿಗೆ ಕಳುಹಿಸಲಾಗುತ್ತದೆ.
| ಡಾ. ಐ.ಬಿ. ಪ್ರಭುಗೌಡ ಡಿಸಿಎಫ್