ಗಜಾನನ ಮನ್ನಿಕೇರಿಗೆ ಸನ್ಮಾನ

11
ಮಮದಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ ಅವರನ್ನು ಸನ್ಮಾನಿಸಲಾಯಿತು. ಜಿ.ಬಿ ಬಳಗಾರ, ಎ.ಸಿ. ಮನ್ನಿಕೇರಿ, ಪ್ರೊ. ಬಿ.ಕೆ. ಕಂಬಿ, ಎಂ.ಎನ್. ಗಾಣಗಿ ಇತರರಿದ್ದರು.
Published on

ಕೊಳವಿ: ಸಮೀಪದ ಮಮದಾಪುರ ಗ್ರಾಮದ ಸರ್ಕಾರಿ ಹಿರಿಯ ಹೆಣ್ಣು ಮತ್ತು ಗಂಡು ಮಕ್ಕಳ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ ಅವರನ್ನು ಸನ್ಮಾನಿಸಲಾಯಿತು.

ಗಜಾನನ ಮನ್ನಿಕೇರಿ ಅವರ ಜೀವನದ ‘ಅಕ್ಷರದೊಳಗಿನ ನಕ್ಷತ್ರ’ ಸ್ವರಚಿತ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು. ಬಿಇಒಗಳಾದ ಜಿ.ಬಿ. ಬಳಗಾರ, ಎ.ಸಿ. ಮನ್ನಿಕೇರಿ, ಪ್ರೊ. ಬಿ.ಕೆ. ಕಂಬಿ, ಎಂ.ಎನ್. ಗಾಣಗಿ, ಎಸ್.ಎಸ್. ಹಿರೇಮಠ, ಎಂ.ಎಸ್. ಹಿತ್ತಲಮನಿ ಮಾತನಾಡಿದರು.

ಶ್ರೀ ಮೌನ ಮಲ್ಲಿಕಾರ್ಜುನ, ಶ್ರೀ ಚರಮೂರ್ತೀಶ್ವರ ಪೂಜ್ಯದ್ವಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ವಗ್ಗನ್ನವರ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಸನದಿ, ಕೆಂಪನ್ನ ಮೈಲನ್ನವರ, ಬಸವ್ವ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಎ.ಬಿ.ಮಲಬನ್ನವರ, ಎಲ್.ಕೆ. ತೋರಣಗಟ್ಟಿ, ಮಲ್ಲಪ್ಪ ಆರ್. ಕಮತ, ಎ.ಎನ್. ತೋಟಗಿ, ವಿನಾಯಕ ಮಾಳಿ, ಮಹೇಶ ಪಾಟೀಲ, ಅಶೋಕ ಗೋಪಾಳಿ, ಎಂ.ಪಿ. ಕೊಣ್ಣೂರ, ಚಿಕ್ಕನ್ನವರ, ಹುಕ್ಕೇರಿ, ಬಿ.ಎಂ. ಗಾಣಗಿ, ಶಂಕರಗೌಡ ಪಾಟೀಲ, ಎಸ್.ಎಸ್.ದಂಡಾಪುರ, ಆರ್.ಬಿ. ಬೆಟಗೇರಿ, ಎಸ್.ಪಿ. ಥೋರಾತ್, ಬಿ.ಆರ್. ಮುರಗೋಡ, ಜಿ.ಎಂ. ರಾಜೇಖಾನ, ಎಂ.ಬಿ. ಪಾಟೀಲ, ಆರ್.ಎಲ್. ಮಿರ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net