

ಗದಗ: ಗಜಾನನ ಸ್ಥಾಪಿಸಿರುವ ನಿಮಿತ್ಯ ನಗರದ ಜಾಗೃತ ಗಜಾನನ ಯುವಕ ಮಂಡಳಿಯ ವತಿಯಿಂದ ಇಂದು (ಮಂಗಳವಾರ) ಬೆಳಗ್ಗೆ 11.00ಘಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ 1.00ಘಂಟೆಗೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರಗುವುದು. ಬುಧವಾರದಂದು ಶ್ರೀ ಜಾಗೃತ ಗಜಾನನ ಮೇಲೆ ಹಾಕಿರುವ ಆಭರಣಗಳನ್ನು ಹಾಗೂ ಅಂತರಗಾಯಿ ಮತ್ತು ಫಲಗಳನ್ನು ಸವಾಲು ಮಾಡುವ ಮೂಲಕ ಭಕ್ತರಿಗೆ ಶ್ರೀ ಗಜಾನನ ಆಶಿರ್ವಾದ ತಲುಪಿಸಿ ನಂತರ 5.00ಘಂಟೆಗೆ ವಿಸರ್ಜನಾ ಕಾರ್ಯಕ್ರಮವನ್ನು ಸಕಲ ವಾದ್ಯಗಳೊಂದಿಗೆ ಎಂದು ಜಾಗೃತ ಯುವಕ ಮಂಡಳ ಪ್ರಕಟಣೆ ತಿಳಿಸಿದೆ.