ಜೈಂಟ್ಸ್ ಸ್ಕೂಲ್ ನಲ್ಲಿ ವಿಜ್ಞಾನ ವಸ್ತು ಪ್ರದರ್ಶನ

IMG_20241224_194730_303.jpg
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಆರ್.ಎನ್. ಶೆಟ್ಟಿ ರಸ್ತೆಯಲ್ಲಿರುವ ಜೈಂಟ್ಸ್ ಇಂಗ್ಲಿಷ್ ಮೀಡಿಯಂ ಸಿಬಿಎಸ್ಇ ಸ್ಕೂಲ್ ನಲ್ಲಿ ಸೋಮವಾರ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಕಲೆ, ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಭವ ಮಾರ್ಕೆಟಿಂಗ್ ಲಿಮಿಟೆಡ್ ಎಂಡಿ ಎಚ್.ಎನ್. ನಂದಕುಮಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹಾಕಲು ಇದು ಉತ್ತಮ ವೇದಿಕೆ. ಇದಕ್ಕೆ ಶಿಕ್ಷಕರು, ಪಾಲಕರ ಸಹಕಾರವೂ ಅಷ್ಟೇ ಮುಖ್ಯ ಎಂದರು.

ಸಂಸ್ಥೆಯ ಅಧ್ಯಕ್ಷ ಪರಶುರಾಮ ಊಟವಾಲೆ ಅಧ್ಯಕ್ಷತೆ ವಹಿಸಿದ್ದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೊಳಿಶೆಟ್ಟಿ, ಹರೀಶ ರೇವಣಕರ, ಅತಿಥಿಗಳಾಗಿದ್ದರು.

ನಮ್ಮೂರು, ಸೌರ ವ್ಯವಸ್ಥೆ, ಬುಲಕ್ ಕಾರ್ಟ್, ಇಕೋ ವಿಲೇಜ್, ಹೈಟೆಕ್ ನೀರಾವರಿ, ಮಳೆ ನೀರು ಕೊಯ್ಲು, ಸ್ಮಾರ್ಟ್ ಸಿಟಿ, ಗೊಂಬೆಯಾಟ, ತರಕಾರಿ ರಂಗೋಲಿ ಮುಂತಾದ ಪ್ರದರ್ಶನಗಳು ಗಮನ ಸೆಳೆದವು.

ಸಂಸ್ಥೆಯ ಸದಸ್ಯರಾದ ಪ್ರವಿಣ ನಾಗರಕಟ್ಟಿ, ಅಶೋಕ ವಕ್ಕುಂದ, ವಸಂತ ನಾಯ್ಕ, ಪ್ರವಿಣ ಮುತಾಲಿಕ, ಅಂಬೇಶ ಊಟವಾಲೆ, ಆಡಳಿತಾಧಿಕಾರಿ ಉಮಾ ಪಾಟೀಲ, ಮುಖ್ಯಾಧ್ಯಾಪಕ ಬಸವರಾಜ ಚಟ್ನಿ, ಶಿಕ್ಷಕರು ಉಪಸ್ಥಿತರಿದ್ದರು.

ನಂದಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಜಯ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net