ಜೈಂಟ್ಸ್ ಗ್ರುಪ್ ಪದಗ್ರಹಣ ಸಮಾರಂಭ

gaints
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜೈಂಟ್ಸ್ ವೆಲ್​ಫೇರ್ ಫೌಂಡೇಷನ್ (ಮುಂಬಯಿ) ವತಿಯಿಂದ ಜೈಂಟ್ಸ್ ಗ್ರುಫ್ ಆಫ್ ಹುಬ್ಬಳ್ಳಿ ಮೇನ್, ಜೈಂಟ್ಸ್ ಗ್ರುಫ್ ಆಫ್ ಸಹೇಲಿ ಹಾಗೂ ಜೈಂಟ್ಸ್ ಗ್ರುಫ್ ಆಫ್ ರಾಜಧಾನಿಕಾಲನಿ ಇವುಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಟೆಗ ಸ್ವರ್ಣಾ ಪ್ಯಾರಡೈಸ್​ನಲ್ಲಿ ನೇರವೇರಿತು.

ಫೆಡರೇಷನ್​ನ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ, ಗಜಾನನ ನೀಲಕೇರಿ, ಲಕ್ಷ್ಮಣ ದೊಡ್ಡಮನಿ, ಜಿ.ಎಸ್. ನಾಯಕ, ಪಾಂಡುರಂಗ ತಳಬೈಲಕರ, ಮನೋಜ ಭಟ್ ಇತರರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳಾದ ಬಿ.ಎ. ಹೂಗಾರ, ಭಾರತಿ ವಾಲಿ, ಶ್ರೀಕಾಂತ ಹಬೀಬ ಹಾಗೂ ಇತರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಡಿ.ಬಿ.ಜವಳಿ, ಆರ್.ವಿ.ಕವಿಶೆಟ್ಟಿ, ಚನ್ನಬಸಪ್ಪ ಧಾರವಾಡಶೆಟ್ಟರ, ಎನ್.ಬಿ. ಹೊಸೂರ, ತಾಳೆಬೈಲಕರ ಉಲ್ಲಾಸ, ಪದ್ಮಜಾ ಉಮರ್ಜಿಯವರನ್ನು ಸನ್ಮಾನಿಸಲಾಯಿತು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತಿ ವಾಲಿಯವರು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಿದರು. ಪದ್ಮಜಾ ಉಮರ್ಜಿ ನಿರೂಪಿಸಿದರು. ಕಾರ್ಯದರ್ಶಿ ವೀರೇಶ ಚಿಕ್ಕಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net