

ಹುಬ್ಬಳ್ಳಿ: ಇಲ್ಲಿಯ ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎರಡು ಫ್ಯಾನ್ ದೇಣಿಗೆ ನೀಡಲಾಯಿತು. ಫ್ಯಾನ್ ಗಳನ್ನು ದೇವಸ್ಥಾನದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.
ದೇವಸ್ಥಾನದ ಪರಶುರಾಮ ಮಲ್ಯಾಳ, ನರಸಪ್ಪ ಮಾದರ, ಮಂಜುನಾಥ ಕೊಂಡಪಲ್ಲಿ, ಆನಂದ ಮಾದರ, ಗ್ರಂಥಪಾಲಕ ಡಾ. ಸುರೇಶ ಹೊರಕೇರಿ, ಜೈಂಟ್ಸ್ ಗ್ರೂಪ್ ಸಹೇಲಿಯ ರೇಖಾ ಚಿನಿವಾಲ್, ಭಾರತಿ ವಾಲಿ, ರೇಣುಕಾ ದೇಸಾಯಿ, ಸೀಮಾ ಕುನ್ನತ, ಮುಂತಾದವರು ಉಪಸ್ಥಿತರಿದ್ದರು.
ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ, ಬಸವ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಶ್ರದ್ಧಾ ಭಕ್ತಿಯಿಂದ ಗೌರವ ಸಲ್ಲಿಸಲಾಯಿತು.