

ಲಕ್ಷ್ಮೇಶ್ವರ: ಶ್ರಾವಣದ ಶ್ರೇಷ್ಠ ಕಾಲದಲ್ಲಿ ದೇವಮಾನವರು, ಮಹಾತ್ಮರು, ಶರಣರು, ಸಂತರು, ಪುಣ್ಯ ಪುರುಷರ ಪುರಾಣ ಪ್ರವಚನ ಕೇಳುವುದರಿಂದ ಮನುಷ್ಯನ ಕಷ್ಟ-ಕಾರ್ಪಣ್ಯ, ಪಾಪ-ಕರ್ಮಗಳು ಕಳೆದು ಶಾಂತಿ, ನೆಮ್ಮದಿ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಸೋಮೇಶ್ವರ ಪುರಾಣ ಸೇವಾ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಶ್ರೀ ಸಿದ್ಧಾರೂಢ ಕಥಾಮೃತ’ ಪುರಾಣ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿ, ನಮ್ಮ ನೆಲದ ಶ್ರೇಷ್ಠತಮವಾದ ಧರ್ಮ, ಸಂಸ್ಕೃತಿ ಆಚಾರ-ವಿಚಾರ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪುರಾಣ-ಪಠಣ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮತ್ತು ಸೋಮೇಶ್ವರ ಭಕ್ತರ ಟ್ರಸ್ಟ್‌ನ ಬಸವೇಶ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಬಿಸಿಎನ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಲೋಹಿತ ನೆಲವಗಿ ಮಾತನಾಡಿದರು. ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗುರಣ್ಣ ಪಾಟೀಲ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಚಂಬಣ್ಣ ಬಾಳಿಕಾಯಿ, ಎಸ್.ಎಫ್. ಆದಿ, ಸುರೇಶ ರಾಚನಾಯ್ಕರ, ಚನ್ನಪ್ಪ ಜಗಲಿ, ಶಂಕರ ಬಾಳಿಕಾಯಿ, ವಿರೂಪಾಕ್ಷ ಆದಿ, ಮಯೂರ ಪಾಟೀಲ, ನಂದೀಶ ಬಂಡಿವಾಡ, ಬಸವರಾಜ ಮೆಣಸಿನಕಾಯಿ, ಎನ್.ಆರ್. ಸಾತಪುತೆ, ಕಾಶಪ್ಪ ಮುಳಗುಂದ, ಶಿವಪುತ್ರಪ್ಪ ಚಾಕಲಬ್ಬಿ, ಅರ್ಚಕ ಸಮೀರ ಪೂಜಾರ ಇತರರಿದ್ದರು. ಜಯಪ್ರಕಾಶ ಹೊಟ್ಟಿ, ಸೋಮಶೇಖರ ಕೆರಿಮನಿ, ಜಿ.ಎಸ್. ಗುಡಗೇರಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಪಂ. ಗುರುಶಾಂತಯ್ಯ ಶಾಸ್ತ್ರಿ ಆರಾಧ್ಯಮಠ ಗವಾಯಿಗಳು ಪುರಾಣ ಪಠಣ-ಪ್ರವಚನಗೈದರೆ ವಿಜಯಕುಮಾರ ಸುತಾರ ತಬಲಾ ಸಾಥ್ ನೀಡಿದರು.