

ಹುಬ್ಬಳ್ಳಿ : ತನ್ನೊಳಗಿನ ಅಜ್ಞಾನವನ್ನು ಜ್ಞಾನದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕಾದರೆ ಪ್ರತಿಯೊಬ್ಬರಿಗೂ ಧ್ಯಾನದ ಅವಶ್ಯಕತೆ ಇದೆ ಎಂದು ಪರಮಾನಂದವಾಡಿಯ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಗುರೂಜಿ ಹೇಳಿದರು.
ಇಲ್ಲಿನ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಬೆಳಗಿನಜಾವದಿಂದ ಸಂಜೆಯವರೆಗೆ ಏರ್ಪಡಿಸಿದ್ದ ಸಂಗೀತದೊಂದಿಗೆ ಸಾಮೂಹಿಕ ಧ್ಯಾನ ಹಾಗೂ ಇನ್ನಿತರ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.
ಧ್ಯಾನ ಎಂಬ ಪದವು ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಧ್ಯಾನದಿಂದ ವಿಶ್ರಾಂತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆಗಳ ವಿಕಾಸವಾಗುತ್ತವೆ. ಧ್ಯಾನ ಮನಸ್ಸಿನ ಏಕಾಗ್ರತೆಯಿಂದ ಮಾತ್ರ ಸಾಧ್ಯ. ಧ್ಯಾನದಿಂದ ಜ್ಞಾನವನ್ನು ಪಡೆದುಕೊಳ್ಳುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಿರಾಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ ಮಾತನಾಡಿ, ಬುದ್ಧ ಮತ್ತು ಬಸವ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಯಶಸ್ವಿ ಮಾನವ ಆಗಲು ಸಾಧ್ಯ ಎಂದು ಹೇಳಿದರು.
ಬಂಢಿವಾಡದ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ, ಬೆಂಗಳೂರಿನ ಬ್ರರ್ಹ¾ ಪ್ರೇಮನಾಥ, ಧ್ಯಾನ ತರಬೇತುದಾರ ಅಯ್ಯಪ್ಪ ಪಿಂಡಿ, ಹೊಸಪೇಟೆಯ ಡಾ. ಹರಿಶಂಕರ, ಮೈಸೂರಿನ ಮನೋರಮಾ, ಚಿಕ್ಕೋಡಿಯ ಡಾ. ಜೀವನಧರ ಕೆಥಪ್ಪನವರ, ಬಳ್ಳಾರಿಯ ಗೀತಾ ಯಾದವ, ಕೊಟ್ಟೂರಿನ ಉಮರಾಣಿ ಅವರು ಧ್ಯಾನ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಪಿರಾಮಿಡ್ವುಾಸ್ಟರ್ ವಿಶಾಲಕ್ಷಿ ಆಕಳವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.