ದಿನಪತ್ರಿಕೆ ಅಧ್ಯಯನದಿಂದ ಜ್ಞಾನಾರ್ಜನೆ

Untitled-2
ಮುಳಬಾಗಿಲಿನ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯ ಗ್ರಂಥ ಪಾಲಕರ ದಿನಾಚರಣೆಯಲ್ಲಿ ಇಒ ಡಾ.ಕೆ. ಸರ್ವೇಶ್​, ಸಹಾಯಕ ನಿರ್ದೇಶಕ ರವಿಚಂದ್ರ, ಗ್ರಂಥಪಾಲಕರ ಸಂಘದ ತಾಲೂಕ ಅಧ್ಯಕ್ಷ ಕುರುಡುಮಲೆ ವಿನಾಯಕ, ಮಾಜಿ ಅಧ್ಯಕ್ಷ ನರಸಿಂಹ ಶೆಟ್ಟಿ, ಕಾರ್ಯದರ್ಶಿ ಮಿಟ್ಟೂರು ರಮೇಶ್​, ಕನ್ನಸಂದ್ರ ಆರ್​. ಸತ್ಯಣ್ಣ, ತಿಮ್ಮರಾವುತನಹಳ್ಳಿ ಕೆ.ಎಸ್​. ದೀಪಿಕಾ ಇದ್ದರು.
Published on

ಮುಳಬಾಗಿಲು : ಓದುಗರ ಸಂಖ್ಯೆ ದಿನೇದಿನೆ ಹೆಚ್ಚುವಂತೆ ಮಾಡಬೇಕಾದ ಜವಾಬ್ದಾರಿ ಗ್ರಂಥಪಾಲಕರದಾಗಿರಬೇಕು. ಪುಸ್ತಕಗಳು, ದಿನಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಸರ್ವೇಶ್​ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ಮಂಗಳವಾರ ಗ್ರಂಥಾಲಯ ಪಿತಾಮಹ ಡಾ.ಎಸ್​.ಆರ್​.ರಂಗನಾಥನ್​ ಅವರ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಂಗನಾಥನ್​ ಅವರು ಬ್ರೆಜಿಲ್​ ದೇಶಕ್ಕೆ ಹೋಗಿ ಸಮೂಹ ಗ್ರಂಥಾಲಯ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಮೂಲಕ ಜನರಿಗೆ ಯಾವ ರೀತಿ ಉಪಯುಕ್ತತೆ ಉಂಟಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿ ನಮ್ಮ ದೇಶದಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಬುನಾದಿ ಹಾಕಿಕೊಟ್ಟಿದ್ದಾರೆ. ರಂಗನಾಥನ್​ ಅವರ ಆದರ್ಶಗಳು ಪ್ರಜ್ವಲಿಸುವಂತೆ ಮಾಡಲು ಸದಾ ಓದುಗರ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುಗೊಳ್ಳುಬೇಕು ಎಂದರು.

ಈಗಾಗಲೇ ತಾಲೂಕಿನ 30 ಗ್ರಾಪಂ ಕೇಂದ್ರಗಳಲ್ಲಿ ಗ್ರಂಥಾಲಯಗಳು ಡಿಜಿಟಲ್​ ಗ್ರಂಥಾಲಯಗಳು ತೆರೆಯಲಾಗಿದೆ. ಈಗ ಹೊಸದಾಗಿ ಹೆಚ್ಚುವರಿಯಾಗಿ 55 ಗ್ರಂಥಾಲಯವನ್ನು ಸರ್ಕಾರ ಮಂಜೂರು ಮಾಡಿದ್ದು, ಆರಂಭಿಕವಾಗಿ ಸರ್ಕಾರಿ ಶಾಲಾ ಶಿಕ್ಷಕರ ನೆರವು ಪಡೆದು ಆ ಶಾಲೆಗಳಲ್ಲಿ ಪ್ರಾರಂಭ ಮಾಡಲಾಗುವುದು, ನಂತರ ಗ್ರಂಥ ಪಾಲಕರನ್ನು ನೇಮಕ ಮಾಡಲಾಗುವುದು ಎಂದರು. ಉತ್ತಮ ಗ್ರಂಥಪಾಲಕರಿಗೆ ಸನ್ಮಾನ: 2024&25ನೇ ಸಾಲಿನ ಉತ್ತಮ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ ಬಲ್ಲ ಗ್ರಾಪಂ ಗ್ರಂಥಪಾಲಕ ಸತೀಶ್​ ಕುಮಾರ್​, ಗುಡಿಪಲ್ಲಿ ಗ್ರಂಥಪಾಲಕ ಚಂದ್ರಶೇಖರ್​ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net