ಸ್ನೇಹಿತರನ್ನು ಸಂಪಾದಿಸುವುದೇ ಶ್ರೀಮಂತಿಕೆ

17 ckm 1
ಚಿಕ್ಕಮಗಳೂರು ಜೇಸಿಐ ಗೋಣಿಬೀಡು ಹೊಯ್ಸಳ ಘಟಕದಿಂದ ಜೇಸಿ ಹಾಲ್ ನಲ್ಲಿ ನಡೆದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ನಿವೃತ್ತ ಪಶುವೈದ್ಯಾಧಿಕಾರಿ ಅಪ್ಪಣ್ಣ ಅವರನ್ನು ಸನ್ಮಾನಿಸಲಾಯಿತು. ಡಾ.ಮೋಹನ್ ರಾಜಣ್ಣ, ಆಶಾ ಜೈನ್, ಎಚ್.ಜಿ.ಆದರ್ಶ, ಬಿ.ಎಂ.ಜಗತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅತಿ ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದೇ ಶ್ರೀಮಂತಿಕೆಯಾಗಿದೆ. ಜೇಸಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನ ಶಿಕ್ಷಣ ಸಿಗುತ್ತದೆ ಎಂದು ಜೇಸಿಐ ವಲಯಾಧ್ಯಕ್ಷೆ ಆಶಾ ಜೈನ್ ತಿಳಿಸಿದರು.

ನಗರದ ಜೇಸಿಐ ಗೋಣಿಬೀಡು ಹೊಯ್ಸಳ ಘಟಕದಿಂದ ಜೇಸಿ ಹಾಲ್ ನಲ್ಲಿ ನಡೆದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಸಮಾಜಮುಖಿ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾದ ಸಮಾಜದಲ್ಲಿನ ಸಮಸ್ಯೆಗಳಿಗೆ ಒಂದಿಷ್ಟಾದರೂ ಪರಿಹಾರ ಒದಗಿಸಲು ಸಾಧ್ಯ ಎಂದು ಹೇಳಿದರು.
ಜೇಸಿಐ ಸ್ಥಾಪಕ ಅಧ್ಯಕ್ಷ ಡಾ. ಮೋಹನ್ ರಾಜಣ್ಣ ಮಾತನಾಡಿ, ನಾಯಕತ್ವದ ಕಲ್ಪನೆ ನೀಡಿದ್ದೆ ಜೇಸಿಐ. ಸಾಮಾಜಿಕ ಸೇವೆಗೆ ಒಳ್ಳೆಯ ಮನಸ್ಸು ಬೇಕು. ಜೇಸಿ ಸಪ್ತಾಹ ಉz್ದೆÃಶ ಹಾಗೂ ಧೈಯೋz್ದÉÃಶಗಳು ಸಮಾಜಕ್ಕೆ ತಲುಪಬೇಕು ಎಂದರು..
ಮಾಜಿ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ ಕಮಲ ಪತ್ರ ಸ್ವೀಕರಿಸಿ ಮಾತನಾಡಿ, ಜೇಸಿಗಳ ಜೊತೆಗೆ ಜೇಸಿಯೆತರ ಹಿರಿಯ ಬಂಧುಗಳು ಪ್ರೋತ್ಸಾಹದ ಸಹಕಾರದಿಂದ ಜೇಸಿ ಬೆಳೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷ ಎಚ್.ಜಿ.ಆದರ್ಶ್ ವಹಿಸಿದ್ದರು. ಇದೇ ವೇಳೆ ನಿವೃತ್ತ ಪಶು ಅಧಿಕಾರಿ ಅಪ್ಪಣ್ಣ ಅವರನ್ನು ಸನ್ಮಾನಿಸಲಾಯಿತು. ಜೇಸಿ ಕಾರ್ಯದರ್ಶಿ ಬಿ.ಎಂ.ಜಗತ್, ಪೂರ್ವಧ್ಯಕ್ಷ ವೈ.ಬಿ.ಸುಂದ್ರೇಶ್, ಸದಸ್ಯರಾದ ಎಂ.ಸಿ.ಗಣೇಶ್‌ಗೌಡ, ಯೋಗೇಶ್, ಕುಮಾರ್, ಸತ್ಯಕುಮಾರ್, ರವಿಕುಮಾರ್, ರಂಜಿತ್, ಪೂರ್ಣೇಶ್, ಭರತ್, ಜ್ಯೋತಿ, ಶ್ವೇತಾ, ದರ್ಶನ್, ದಿಲೀಪ್, ಸಂತೋಷ್, ಚೇತನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net