ಬದಲಾಗುತ್ತಿರುವ ಮಾರುಕಟ್ಟೆಯ ಜ್ಞಾನ ಪಡೆಯಿರಿ

Gain knowledge of the changing market
ಗುಳೇದಗುಡ್ಡದ ಭಂಡಾರಿ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಇತ್ತೀಚಿನ ಪವೃತ್ತಿಗಳು ಮತ್ತು ಹೊಸ ಶೋಧನೆಗಳ ವಿಚಾರ ಕುರಿತು ಒಂದು ದಿನದ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿತ್ತು. ಡಾ. ಸೈಯದ್ ಮಸೂಮಲಿ, ಕಮಲಕಿಶೋರಜಿ ಭಂಡಾರಿ, ಡಾ. ನಾಗರಾಜ ಡಾ.ಎನ್.ವೈ. ಬಡನ್ನವರ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ಸಾಮಾಜಿಕ ಜಾಲತಾಣ, ಆನ್‌ಲೈನ್ ಮಾರುಕಟ್ಟೆ ಹಾಗೂ ಎಐ ತಂತ್ರಜ್ಞಾನಗಳು ಸಾಂಪ್ರದಾಯಿಕ ಮಾರುಕಟ್ಟೆ ರೂಪವನ್ನು ಬದಲಾಯಿಸುವುದರೊಂದಿಗೆ ಮಾರುಕಟ್ಟೆ ವಿಸ್ತರಿಸುವ ಮೂಲಕ ಅವಕಾಶ ಹೆಚ್ಚಿಸುತ್ತಿದೆ ಎಂದು ಅಹಲ್ಯಾದೇವಿ ಹೋಳ್ಕರ್ ಸೋಲ್ಲಾಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸೈಯದ್ ಮಸೂಮಲಿ ಹೇಳಿದರು.

ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ದೆಹಲಿಯ ಇಂಡಿಯನ್ ಕೌನ್ಸಿಲ್ ಆ್ ಸೋಸಿಯಲ್ ಸೈನ್ಸ್ ರಿಸರ್ಚ್ ಸಹಯೋಗದಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜಿನ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಇತ್ತೀಚಿನ ಪವೃತ್ತಿಗಳು ಮತ್ತು ಹೊಸ ಶೋಧನೆಗಳ ವಿಚಾರ ಕುರಿತು ಒಂದು ದಿನದ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಾಂತ್ರಿಕತೆ, ಮಾರುಕಟ್ಟೆಯ ಬಗ್ಗೆ ವಿದ್ಯಾರ್ಥಿಗಳು ಜ್ಞಾನ ಹೊಂದಿರಬೇಕು. ಅಧ್ಯಯನದಲ್ಲಿ ತೊಡಗುವುದರ ಜತೆಗೆ ಕಾರ್ಯಗಾರಗಳಲ್ಲಿ ಭಾಗವಹಿಸಿ, ಸಂಶೋಧನಾ ಪ್ರಬಂಧಗಳನ್ನು ಮಂಡಿಸಬೇಕು ಎಂದರು.

ಸಂಸ್ಥೆಯ ಚೇರ್ಮನ್ ಕಮಲಕಿಶೋರಜಿ ಭಂಡಾರಿ ಅವರು ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾರ್ಯಾಗಾರಕ್ಕೆ ಸುತ್ತಮುತ್ತಲಿನ ಜಿಲ್ಲೆಯಿಂದ ಮಾತ್ರವಲ್ಲದೇ ಮೈಸೂರು ಮತ್ತಿತರೆಡೆಗಳಿಂದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಕಾರ್ಯಾಗಾರಕ್ಕೆ ಆಗಮಿಸಿದ್ದಾರೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ನಾಗರಾಜ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಎನ್.ವೈ. ಬಡನ್ನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ನಿರ್ದೇಶಕರುಗಳಾದ ರಾಜಶೇಖರ ಶೀಲವಂತ, ರಾಮೇಶ್ವರಜಿ ರಾಠಿ, ರಾಜು ತಾಪಡಿಯಾ ಎಲ್. ಆರ್ ಕಾಬ್ರಾ, ವಿಶ್ವನಾಥ ಅಂಗಡಿ, ಅಶೋಕ ಹೆಗಡೆ, ಜಗದೀಶ ಸೋನಿ, ಸಿದ್ದಲಿಂಗಪ್ಪ ಬರಗುಂಡಿ, ಎಸ್.ಎಸ್. ನಾಯನೆಗಲಿ, ಸಿದ್ದರಾಮಯ್ಯ ಪುರಾಣಿಕಮಠ, ಶಾಮಸುಂದರ ಮಾಲಪಾಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net