

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಗ್ರಾಮ ಗೌಡ ಸಮಿತಿ ಮಂಡೆಕೋಲು ಆಶ್ರಯದಲ್ಲಿ ಡಿ.1ರಂದು ನಡೆಯುವ ಅರೆಭಾಷೆ ಗಡಿನಾಡ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಶುಕ್ರವಾರ ನಡೆಯಿತು. ರೈಲ್ವೆ ನಿವೃತ್ತ ಅಧಿಕಾರಿ ಡಿ.ವಿ.ಸುರೇಶ್ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಕಾರ್ಯಕ್ರಮದ ರೂಪುರೇಷೆಯನ್ನು ಕಾರ್ಯಕ್ರಮ ಸಂಚಾಲಕ ಡಾ.ಜ್ಞಾನೇಶ್ ಎನ್.ಎ.ವಿವರಿಸಿದರು. ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.
ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ್ ಪೇರಾಲ್, ಲೋಕೇಶ್ ಊರುಬೈಲ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಹರಿಶ್ಚಂದ್ರ ಪಾತಿಕಲ್ಲು, ನಾಗೇಶ್ ದೇವರಗುಂಡ, ಜನಾರ್ದನ ಬರೆಮೇಲು, ಮೇದಪ್ಪ ಗೌಡ ಬೊಳುಗಲ್ಲು, ಜಯಪ್ರಕಾಶ್ ಕುಕ್ಕೆಟ್ಟಿ, ಶುಭಕರ ಬೊಳುಗಲ್ಲು, ಲಕ್ಷ್ಮಣ ಉಗ್ರಾಣಿಮನೆ, ಆನಂದ ಬದಿಕಾನ ದಾಮೋಧರ ಪಾತಿಕಲ್ಲು, ಹರೀಶ್ ಕಲ್ಲಡ್ಕ, ಪುರುಷೋತ್ತಮ, ವಸಂತಿ ಬೊಳುಗಲ್ಲು, ಭಾರತಿ ಉಗ್ರಾಣಿಮನೆ ದೀಪಿಕಾ ಅತ್ಯಾಡಿ ಉಪಸ್ಥಿತರಿದ್ದರು.
ಗೌಡ ಸಮಿತಿ ಕಾರ್ಯದರ್ಶಿ ದಾಮೋದರ ಮಿತ್ತಪೇರಾಲು ಸ್ವಾಗತಿಸಿ, ಗ್ರಾಮ ಮಹಿಳಾ ಘಟಕ ಅಧ್ಯಕ್ಷೆ ದಿವ್ಯಲತಾ ಚೌಟಾಜೆ ವಂದಿಸಿದರು.
.