ಸ್ಕಂದಗೆ ಗಡಿನಾಡ ಸಾಧಕ ಪ್ರಶಸ್ತಿ ಪ್ರದಾನ

Bdk_Gadinadu
Published on

ಪೆರ್ಲ: ಮಂಗಳೂರಿನ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಹಾಗೂ ಕಲ್ಕೂರ ಪ್ರತಿಷ್ಠಾನದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ನೀಡಲ್ಪಡುವ ಪ್ರತಿಷ್ಠಿತ ರಾಜ್ಯೋತ್ಸವ ಗಡಿನಾಡ ಸಾಧಕ ಪ್ರಶಸ್ತಿಯನ್ನು, ಯುವ ಯಕ್ಷ ಪ್ರತಿಭೆ ಕಾಟುಕುಕ್ಕೆ ಗ್ರಾಮದ ಸ್ಕಂದ ಸಿ.ಎಸ್.ಗೆ ಇತ್ತೀಚೆಗೆ ಪ್ರದಾನಿಸಲಾಯಿತು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಿಟ್ಟೆ ಯುನಿವರ್ಸಿಟಿಯ ಡಾ.ಶಾಂತಾರಾಮ ಶೆಟ್ಟಿ, ಪ್ರೊ.ಎಂ.ಬಿ.ಪುರಾಣಿಕ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಆಕಾಶವಾಣಿ ಗುಲ್ಬರ್ಗ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಚಂದ್ರಹಾಸ, ಸಹನಾ ಅರೆಕ್ಕಾಡಿ, ವಿದುಷಿ ಕಮಲ ಭಟ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net