ಗದ್ದಿಗೌಡರದ್ದು ಭಾರಿ ಅಂತರದ ಗೆಲುವು

Gaddigowdar won by a huge margin
ತೇರದಾಳ ಶಾಸಕ ಸಿದ್ದು ಸವದಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
Published on

ರಬಕವಿ-ಬನಹಟ್ಟಿ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರಾದ್ಯಂತ ಬಿಜೆಪಿ ಅಲೆ ಹೆಚ್ಚಿದೆ. ಈ ಬಾರಿ ಕಳೆದ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಅಂತರದ ಗೆಲುವು ಪಿ.ಸಿ. ಗದ್ದಿಗೌಡರದ್ದಾಗಲಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಬನಹಟ್ಟಿಯಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಗದ್ದಿಗೌಡರ ವಿರುದ್ಧ ಎದುರಾಳಿ ಪ್ರತಿಸ್ಪರ್ಧಿಯೇ ಇಲ್ಲ. ಅದರಂತೆ ನಿರಾಯಾಸದ ಗೆಲುವು ಬಿಜೆಪಿಯದ್ದಾಗಿದೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು.

ಪ್ರತಿ ಮತಗಟ್ಟೆಯಲ್ಲಿಯೂ ಕಮಲ ಚಿಹ್ನೆಗೆ ಹೆಚ್ಚು ಮತಗಳು ಬೀಳಲಿದ್ದು, ತೇರದಾಳ ಕ್ಷೇತ್ರಾದ್ಯಂತ ಎಲ್ಲೆಡೆ ಕಾರ್ಯಕರ್ತರ ಜಾಗೃತಿ ಹಾಗೂ ಮತದಾರರ ಎಚ್ಚರಿಕೆ ನಡೆ ಗದ್ದಿಗೌಡರಿಗೆ ಆಶೀರ್ವಾದವಾಗಿದೆ. ಕಳೆದ ಬಾರಿ ತೇರದಾಳ ಕ್ಷೇತ್ರ ಬಿಜೆಪಿಗೆ 36 ಸಾವಿರ ಲೀಡ್ ಕೊಟ್ಟು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ 40 ಸಾವಿರ ಮತಗಳ ಲೀಡ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net