

ಮುದಗಲ್: ಸಮೀಪದ ಆಮದಿಹಾಳ ಗ್ರಾಮದಲ್ಲಿ ಈಚನಾಳ ಗದ್ದೆಮ್ಮದೇವಿ ಮೂರ್ತಿ ಮೆರವಣಿಗೆ ಗುರುವಾರ ಅದ್ದೂರಿಯಾಗಿ ಜರುಗಿತು. ಸುಮಂಗಲೆಯರು ಕಳಸ, ಕುಂಭ, ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವತೆ ಮೂರ್ತಿ ಮೆರವಣಿಗೆ ಮಾಡಲಾಯಿತು.
ತದನಂತರ ದೇವಸ್ಥಾನಕ್ಕೆ ಕಲಶಾರೋಹಣ ಮಾಡಲಾಯಿತು. ಜಾತ್ರೆ ನಿಮಿತ್ತ ವಿಶೇಷ ಪೂಜೆ, ಹರಕೆ ಸಲ್ಲಿಸುವ ಕಾರ್ಯಕ್ರಮ ಜರುಗಿತು. ಆದಾಪುರ, ಯರದಿಹಾಳ, ಉಪ್ಪಾರನಂದಿಹಾಳ, ಆಶಿಹಾಳ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾದರು.
ಯರದೊಡ್ಡಿ ತಾಂಡಾ: ಯರದೊಡ್ಡಿ ತಾಂಡಾದಲ್ಲಿ ಗ್ರಾಮ ದೇವತೆ ಶ್ರೀ ಗದ್ದೆಮ್ಮ ದೇವಿ ಜಾತ್ರೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ ಮತ್ತು ಪೂರ್ಣ ಕುಂಭಗಳ ಮೆರವಣಿಗೆ ನಡೆಸಲಾಯಿತು.
ದೇವಸ್ಥಾನದ ಅರ್ಚಕ ರಾಮಚಂದ್ರಪ್ಪ ಪೂಜಾರಿ ಅವರು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮುಡುಪು ಸಮರ್ಪಣೆ ಮಾಡಿದರು. ಗ್ರಾಪಂ ಸದಸ್ಯ ಮಾನಸಿಂಗ್ ರಾಠೋಡ್, ಪ್ರಮುಖರಾದ ರಮೇಶ ರಾಠೋಡ್, ಶೇಟಪ್ಪ , ಗಿರಿಯಪ್ಪ ರಾಠೋಡ, ಕುಮಾರ ಯಮನೂರ ಇತರರಿದ್ದರು.