

ಸಿಂಧನೂರು: ನಗರದ ತಹಸಿಲ್ ಕಚೇರಿ ಮುಂಭಾಗದಲ್ಲಿ ಕಾಮ್ರೇಡ್ ಗದ್ದರ್ ಸ್ಮರಣಾರ್ಥ ಸ್ವರ ಸ್ಮರಣೆ ಸಭೆ ಆಯೋಜಿಸಲಾಗಿತ್ತು.
ಶ್ರಮಜೀವ ಹಮಾಲರ ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರ ನೇತೃತ್ವದಲ್ಲಿ ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಆಗಮಿಸಿದ್ದ ಕ್ರಾಂತಿಕಾರಿ ಹಾಡುಗಾರರು ವಿವಿಧ ವಾದ್ಯಮೇಳದೊಂದಿಗೆ ಹಾಡುಗಳನ್ನು ಹಾಡಿದರು. ದಲಿತ ಕವಿ ಸಿ.ದಾನಪ್ಪ ನಿಲೋಗಲ್, ಅಂಬಣ್ಣ ಅರೋಲಿ, ಎಂ.ಆರ್.ಭೇರ‌್ಗಿ, ಶರಣ ಕಲಾ ಬಳಗದ ರಮೇಶ ಗಬ್ಬೂರು, ಅನಂದ ಭಂಡಾರಿ, ಗೌರಿ ಕೊಪ್ಪಳ, ಹೈದರಲಿ ಪಲಕನಮರಡಿ ಹಾಗೂ ಇತರರು ಕ್ರಾಂತಿಗೀತೆಗಳನ್ನು ಹಾಡಿದರು.