

ಗಂಗಾವತಿ: ಚಳವಳಿಗೆ ಪ್ರೇರಣೆಯಾಗಿದ್ದ ಗದ್ದರ್, ಸಾಂಸ್ಕೃತಿಕ ಲೋಕದ ಬಹುದೊಡ್ಡ ಧ್ರುವತಾರೆ ಎಂದು ಲೇಖಕ ಡಾ.ಲಿಂಗಣ್ಣ ಜಂಗಮರಹಳ್ಳಿ ಹೇಳಿದರು.
ಇದನ್ನೂ ಓದಿ:http://ಗದ್ದರ್ ಸಾಂಸ್ಕೃತಿಕ ಲೋಕದ ಧ್ರುವತಾರೆ
ನಗರದ ಕ್ರಾಂತಿಚಕ್ರ ಬಳಗದ ಕಚೇರಿಯಲ್ಲಿ ಗುಮ್ಮಡಿ ವಿಠ್ಠಲರಾವ್ ಗದ್ದರ್ ಸ್ಮರಣೆ ನಿಮಿತ್ತ ಸಮಾನ ಮನಸ್ಕರ ಗೆಳೆಯರ ಬಳಗದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಕ್ರಾಂತಿಕಾರಿ ಕವಿ ಹಾಗೂ ಗಾಯಕನಾಗಿ ದುಡಿಯುವವರ ಶಕ್ತಿಯಾಗಿ ಹೋರಾಟಕ್ಕೆ ಮತ್ತು ಹಾಡುಗಳಿಗೆ ಸ್ಫೂರ್ತಿಯಾಗಿದ್ದರು ಎಂದರು. ಸಿಪಿಐ(ಎಂಎಲ್)ಲಿಬರೇಶನ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯ ಜೆ.ಭಾರದ್ವಾಜ್ದೊ ಇತರರಿದ್ದರು.