ರಸ್ತೆ ಉಬ್ಬಿಗೆ ಬಣ್ಣ ಬಳಿದ ಯುವಕರು !

ರಸ್ತೆಯ ಹಂಪ್ಸ್‌ಗಳಿಗೆ ಬಣ್ಣ ಹಚ್ಚಿದ ಹರದಗಟ್ಟಿ ಯುವಕರು...!
ರಸ್ತೆಯ ಹಂಪ್ಸ್‌ಗಳಿಗೆ ಬಣ್ಣ ಹಚ್ಚಿದ ಹರದಗಟ್ಟಿ ಯುವಕರು...!
Published on
ಲಕ್ಷ್ಮೇಶ್ವರ: ಪಟ್ಟಣದಿಂದ ಹರದಗಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಹಾಕಿದ್ದ ರೋಡ್  ಹಂಪ್ಸ್‌ಗಳಿಗೆ (ರಸ್ತೆ ಉಬ್ಬು) ಹರದಗಟ್ಟಿ ಗ್ರಾಮದ ಯುವಕರು ಸ್ವಂತ ಖರ್ಚಿನಲ್ಲಿ ಬಿಳಿ ಬಣ್ಣದ ಪಟ್ಟಿ ಬಳಿದು ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಬಳಿಕ ಕಳೆದ ನಾಲ್ಕು ತಿಂಗಳ ಹಿಂದೆ ಅಪಘಾತ ವಲಯದಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್ ನಿರ್ಮಿಸಲಾಗಿತ್ತು. ಇದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗಿತ್ತು. ಅಟೋರಿಕ್ಷಾ, ಬೈಕ್ ಸವಾರರು ಬಿದ್ದು ಆಸ್ಪತ್ರೆ ಸೇರಿದ್ದುಂಟು. ಟ್ರ್ಯಾಕ್ಟರ್, ಲಾರಿಯೂ ಪಲ್ಟಿಯಾಗಿದ್ದುಂಟು. ಈ ಬಗ್ಗೆ ಸಂಬಂಧಪಟ್ಟ ಪಿಡಬ್ಲುೃಡಿ ಇಲಾಖೆಯವರಿಗೆ ರೋಡ್ ಹಂಪ್ಸ್‌ಗೆ ಬಣ್ಣ, ರಿಪ್ಲೆಕ್ಟರ್ ಹಾಕುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ಇದನ್ನರಿತ ಗ್ರಾಮದ ಜಗದೀಶ ಲಮಾಣಿ, ರೋಹನ್ ಲಮಾಣಿ, ಬಸವರಾಜ ಲಮಾಣಿ, ಪರಮೇಶ ಲಮಾಣಿ, ಶಿವಕುಮಾರ ತಳವಾರ, ಸಾಯಿನಾಥ ನಾಯಕ, ಮುತ್ತು ಲಮಾಣಿ ಎಂಬ ಯುವಕರು ತಮ್ಮ ಸ್ವಂತ ಹಣದಲ್ಲಿ ಬಿಳಿ ಬಣ್ಣ ತಂದು ತಾವೇ ಬಣ್ಣ ಹಚ್ಚಿ ಸಾಮಾಜಿಕ ಕಳಕಳಿ, ಮಾನವೀಯತೆ ಮೆರದಿರುವುದು ಸಾರ್ವಜನಿಕರ ಪ್ರಶಂಸಗೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net