ಲಕ್ಷ್ಮೇಶ್ವರದಲ್ಲಿ ಹಾಡಹಗಲೇ ಯುವಕನ ಹತ್ಯೆ

ಇರ್ಫಾನ್ ತಹಶೀಲ್ದಾರ್ (36) ಹತ್ಯೆಗೀಡಾದ ಯುವಕ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ
ಇರ್ಫಾನ್ ತಹಶೀಲ್ದಾರ್.
ಇರ್ಫಾನ್ ತಹಶೀಲ್ದಾರ್.
Published on

ಲಕ್ಷ್ಮೇಶ್ವರ: ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಪಟ್ಟಣದ ತಟ್ಟಿ ಬಡಾವಣೆಯಲ್ಲಿ ಬುಧವಾರ ಹಾಡಹಗಲೇ ಸಂಭವಿಸಿದೆ.

ಪಟ್ಟಣದ ಗಡ್ಡದೇವರಮಠ ಬಡಾವಣೆ ನಿವಾಸಿ ಇರ್ಫಾನ್ ತಹಶೀಲ್ದಾರ್ (36) ಹತ್ಯೆಗೀಡಾದ ಯುವಕ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಸೇರಿತ್ತು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಗಂಭೀರತೆ ಅರಿತು ಸ್ಥಳಕ್ಕೆ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಆನಂದ ಕ್ಯಾರಿಕಟ್ಟಿ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ ಇತರರು ಆಗಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಎಸ್ಪಿ ಮಿಥುನ್ ಎಚ್.ಎನ್. ಡಿವೈಎಸ್ಪಿ ಮುರ್ತುಜಾ ಖಾದ್ರಿ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು.

ಮೂವರು ಶರಣು?

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯಾದವ ರೌಡಿಶೀಟರ್ ಆಗಿದ್ದ. ಹತ್ಯೆಯ ಹಿಂದಿನ ಕಾರಣ, ಆರೋಪಿಗಳ ಪಾತ್ರ ಹಾಗೂ ಘಟನೆಗೆ ಬಳಸಲಾಗಿದೆ ಎನ್ನಲಾದ ಮಾರಕಾಸ್ತ್ರಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಎಸ್ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net