ನರಗುಂದ ದರ್ಗಾದಲ್ಲಿ ಈಶ್ವರ, ನಂದಿ ಪೂಜೆ dargah

dargah ನರಗುಂದ ಹಜರತ್ ಮೆಹಬೂಬಸುಭಾನಿ ದರ್ಗಾದಲ್ಲಿ ಮಣ್ಣಿನ ಈಶ್ವರಲಿಂಗ, ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
dargah ನರಗುಂದ ಹಜರತ್ ಮೆಹಬೂಬಸುಭಾನಿ ದರ್ಗಾದಲ್ಲಿ ಮಣ್ಣಿನ ಈಶ್ವರಲಿಂಗ, ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
Published on
ನರಗುಂದ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಹಜರತ್ ಮೆಹಬೂಬಸುಭಾನಿ ದರ್ಗಾದಲ್ಲಿ ಮಣ್ಣಿನ ಈಶ್ವರಲಿಂಗ, ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಿಂದು-ಮುಸ್ಲಿಂ ಸಂಪ್ರದಾಯಗಳಂತೆ ಬುಧವಾರ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಯಿತು.
ದರ್ಗಾದ ಶರಣ ಶ್ರೀಬಾಬುಸಾಹೇಬ ಜಮಾದಾರ ಅವರ ಸಾನ್ನಿಧ್ಯದಲ್ಲಿ ಬೆಳಗ್ಗೆ ಎರಡು ಮೂರ್ತಿಗಳಿಗೆ ಪುಷ್ಪಾಲಂಕಾರ ಮಾಡಿ ಹಿಂದು ಸಂಪ್ರದಾಯದಂತೆ ಓಂ ನಮಃ ಶಿವಾಯ ಜಪ, ಮುಸ್ಲಿಂ ಸಂಪ್ರದಾಯದಂತೆ ದುವಾದ ವಿಶೇಷ ಪ್ರಾರ್ಥನೆ, ಮಹಾಮಂಗಳಾರತಿ ಸಲ್ಲಿಸಿದ ಬಳಿಕ ಭಕ್ತರು ಎಳ್ಳು-ಬೆಲ್ಲ ನೀಡಿ ಪರಸ್ಪರ ಶುಭಾಶಯ ಕೋರಿದರು.
ರಾಘವೇಂದ್ರ ಶೆಟ್ಟಿ, ಜ್ಯೋತಿಭಾ ಕನ್ಸೆ, ಸಚೀನ ಗಡಾದ, ಮೊಹಮ್ಮದ್ ನಾಯ್ಕರ, ಹುಸೇನಸಾಬ ಭೈರಕದಾರ, ಕಾಸೀಂಸಾಬ ಜಮಾದಾರ, ಅನಿಲ ಘೋರ್ಪಡೆ, ಶಾಂತು ಧಾರವಾಡ, ವಿಶ್ವನಾಥ ಸುಬೇದಾರ, ಹಜರತ, ಸುಭಾನಿ ಜಮಾದಾರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net