Women's : ಮಹಿಳೆಯರು ಸಂಸ್ಕಾರ, ಮೌಲ್ಯಗಳ ರಕ್ಷಕರು

ರೋಣ ಪಟ್ಟಣದ ಶಿವಾನಂದ ನಗರದ ಶ್ರೀ ಹಾದಿ ಬಸವೇಶ್ವರ ಸಮುದಾಯ ಭವನದಲ್ಲಿ ಮಹಿಳಾ (Women's)) ದಿನ ಆಚರಿಸಲಾಯಿತು. ರಾಜ್ಯ ರೈತ ಸಂಘದ ಮಹಿಳಾ ಉಪಾಧ್ಯಕ್ಷೆ ಡಾ. ಲೀಲಾವತಿ ಚಿತ್ರಗಾರ, ಶೈಲಜಾ ಕಮತರ, ವರದಾ ವಿರಕ್ತಮಠ, ಶ್ರುತಿ ದಾನಾಪುರ, ಗೀತಾ ಮಂಗಳೂರ, ಜ್ಯೋತಿ ಲಿಂಗನಗೌಡ್ರ, ಮಾಲಾ, ಅಣ್ಣಕ್ಕ ಹುಲ್ಲಣ್ಣವರ, ದೀಪಾ ಹುನಗುಂಡಿ, ರುಕ್ಮಿಣಿ ಚಿತ್ರಗಾರ, ಭಾರತಿ ಕುರಿ ಇತರರು ಇದ್ದರು.

Published on
ರೋಣ: ಮಹಿಳೆ (Women's) ಇಂದು ಎಲ್ಲ ರಂಗದಲ್ಲೂ ಮುಂದುವರಿದಿದ್ದು, ಸಾಧನೆ ಮಾಡಲು ಹಿಂಜರಿಯದೇ ಮುನ್ನುಗ್ಗಬೇಕು ಎಂದು ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆ ಡಾ. ಲೀಲಾವತಿ ಚಿತ್ರಗಾರ ಹೇಳಿದರು.
ಪಟ್ಟಣದ ಶಿವಾನಂದ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರೀ ಹಾದಿ ಬಸವೇಶ್ವರ ಮಹಿಳಾ ಮಂಡಳ ಹಾಗೂ ರೈತ ಸಂಘದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯವಾಗುತ್ತದೆ. ಮಹಿಳೆಯರು ಸಂಸ್ಕಾರ ಮತ್ತು ಮೌಲ್ಯಗಳ ರಕ್ಷಕರು. ಮಹಿಳೆಯರು ಆತ್ಮವಿಶ್ವಾಸದಿಂದ ಸಮಾಜ ಸೇವೆಯಲ್ಲಿ ತೊಡಗಿದಾಗ ಸಮಾಜದಲ್ಲಿ ಉತ್ತಮ ಪರಿವರ್ತನೆಗಳು ಆಗುತ್ತವೆ ಎಂದರು.

ಗಮನಸೆಳೆದ ಆಟೋಟಗಳು:

ಕೆರೆ ದಡ ಆಟ, ಮೇಣದ ಬತ್ತಿ ಹಚ್ಚುವುದು, ಬಕೆಟ್‌ನಲ್ಲಿ ಬಾಲ್ ಎಸೆಯುವುದು, ಜನಪದ ಹಾಡು, ಸೋಬಾನೆ ಪದ, ನೃತ್ಯ, ಭಾಷಣ, ಕವನ, ಇತ್ಯಾದಿ ರಸಮಂಜರಿ ಕಾರ್ಯಕ್ರಮಗಳು ಗಮನಸೆಳೆದವು.
ಶ್ರೀ ಬಸವೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ಶೈಲಜಾ ಕಮತರ, ಉಪಾಧ್ಯಕ್ಷೆ ವರದಾ ವಿರಕ್ತಮಠ, ಸದಸ್ಯರಾದ ಜಯಶ್ರೀ ಹಿರೇಮಠ, ಪಾರ್ವತಿ ರೊಟ್ಟಿ, ಅನ್ನಕ್ಕ ಸಂದಿಗವಾಡ, ರತ್ನಾ ನೀರಲಗಿಮಠ, ಗೀತಾ ಮಂಗಳೂರು, ನಿರ್ಮಲಾ ಪೂಜಾರ, ಅನ್ನಪೂರ್ಣ ಬಳಗೋಡ, ಭಾರತಿ ಕುರಿ, ವಿದ್ಯಾ, ದೀಪಾ ಹುನಗುಂಡಿ, ಅಕ್ಕಮ್ಮ ಹುನಗುಂಡಿ, ಜಯಶ್ರೀ ಬೂದಿಹಾಳ, ಸೀತಾ ಸುರಪೂರ, ರಾಜೇಶ್ವರಿ ಕೊಪ್ಪದ, ಕವಿತಾ ಕಟ್ಟಿಮನಿ, ಶ್ರುತಿ ದಾನಾಪುರ, ಉಮಾ ತೊಗುಣಸಿ, ಶಿವಲೀಲಾ ಮಾಳವಾಡ, ರೇಖಾ ಗಡಗಿ, ಜ್ಯೋತಿ ಲಿಂಗನಗೌಡ್ರ, ರೇಖಾ ಹವಳಪ್ಪನವರ, ಅಂಬಿಕಾ, ಮಾಲಾ, ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net