ಲಕ್ಷ್ಮೇಶ್ವರ: ಸೋಮೇಶ್ವರ ದೇವಸ್ಥಾನದಲ್ಲಿ ಮಾ.14ರಂದು ಸಂಜೆ 5.30ಕ್ಕೆ ಮೈತ್ರಿ-85 ಬಳಗ ಮತ್ತು ರಾಯಚೂರಿನ ಸದಾನಂದ ಕನವಳ್ಳಿ ಆರ್ಟ್ ಫೌಂಡೇಷನ್ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಮತ್ತು ಶಾಸ್ತ್ರೀಯ ಸಂಗೀತ ಏರ್ಪಾಟಾಗಿದೆ. ಸೋಮೇಶ್ವರ ಭಕ್ತರ ಸೇವಾ ಟ್ರಸ್ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಸದಾನಂದ ಕನವಳ್ಳಿ ಆರ್ಟ್ ಫೌಂಡೇಷನ್‌ನ ಕೆ. ಮಹೇಶ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ನಿಕಟಪೂರ್ವ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಮೈತ್ರಿ ಬಳಗದ ಅಧ್ಯಕ್ಷ ಸುರೇಶ ಚೋಟಗಲ್ಲ, ಕಾರ್ಯದರ್ಶಿ ಮಹಾದೇವ ಪವಾರ ಆಗಮಿಸಲಿದ್ದಾರೆ. ಸಹಾಯಕ ಪ್ರಾಧ್ಯಾಪಕ ಡಾ. ರೇಣುಕಾ ಎಲ್. ನಾಯಕ ಉಪನ್ಯಾಸ ನೀಡುವರು. ಸರಿತಾ ಮಹೇಶ ಹಾಗೂ ವೆಂಕಟೇಶ ಪಾಟೀಲ ಅವರಿಂದ ಹಿಂದೂಸ್ತಾನಿ ಸಂಗೀತ ಪ್ರಸ್ತುತವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.