Women's Day: ಸವಾಲು ಸ್ವೀಕರಿಸಿ ಸಾಧನೆ ಮಾಡಿ

ಗಜೇಂದ್ರಗಡ ಪಟ್ಟಣದ ಜಿ.ಕೆ.ಬಂಡಿ ಗಾರ್ಡನ್‌ನಲ್ಲಿ ಶನಿವಾರ ಆಯೋಜಿಸಿದ್ದ ( Women's Day) ಮಹಿಳಾ ದಿನಾಚರಣೆಯನ್ನು ಶಶಿಕಲಾ ಮಿಥುನ್ ಪಾಟೀಲ ಉದ್ಘಾಟಿಸಿದರು. ವಿದ್ಯಾ ಬಂಡಿ, ಮಂಗಲಾ ದೇಶಮುಖ, ಸುಮಂಗಲಾ ಇಟಗಿ, ಸವಿತಾ ಬಿದರಳ್ಳಿ,ಇತರರಿದ್ದರು.
ಗಜೇಂದ್ರಗಡ ಪಟ್ಟಣದ ಜಿ.ಕೆ.ಬಂಡಿ ಗಾರ್ಡನ್‌ನಲ್ಲಿ ಶನಿವಾರ ಆಯೋಜಿಸಿದ್ದ ( Women's Day) ಮಹಿಳಾ ದಿನಾಚರಣೆಯನ್ನು ಶಶಿಕಲಾ ಮಿಥುನ್ ಪಾಟೀಲ ಉದ್ಘಾಟಿಸಿದರು. ವಿದ್ಯಾ ಬಂಡಿ, ಮಂಗಲಾ ದೇಶಮುಖ, ಸುಮಂಗಲಾ ಇಟಗಿ, ಸವಿತಾ ಬಿದರಳ್ಳಿ,ಇತರರಿದ್ದರು.
Published on
ಗಜೇಂದ್ರಗಡ: ಪುರುಷ ಪ್ರಧಾನ ಸಮಾಜವೆಂಬುದು ಸಮಾನತೆಯತ್ತ ಬದಲಾಗುತ್ತಿದೆ. ( Women's Day) ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಅರ್ಹತೆ, ಸಾಮರ್ಥ್ಯದ ಮೂಲಕ ಸಾಧನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಅನೇಕ ಮಹಿಳೆಯರು ಉನ್ನತ ಸ್ಥಾನ ನಿಭಾಯಿಸುತ್ತಿದ್ದಾರೆ, ದೊಡ್ಡ ದೊಡ್ಡ ಉದ್ದಿಮೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದು ಸ್ಪಂದನಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ಮಿಥುನ್ ಪಾಟೀಲ ಹೇಳಿದರು.
ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಶನಿವಾರ ಸ್ಪಂದನಾ ಮಹಿಳಾ ಮಂಡಳಿ ರೋಣ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ‘ಕೆಲವು ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಲ್ಲ ಹೆಣ್ಣುಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬಂದು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಮಹಿಳೆಯರು ತಮ್ಮ ಹಕ್ಕು ಏನೆಂದು ತಿಳಿಯಬೇಕು. ಸರ್ಕಾರದ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸಶಕ್ತರಾಗಬೇಕು, ಸಬಲೀಕರಣಗೊಂಡು ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದ ಬದಲಾವಣೆಗೆ ಪ್ರಮುಖ ಪಾತ್ರ ವಹಿಸಬೇಕು’ ಎಂದರು.
ವಿದ್ಯಾ ಎಸ್.ಬಂಡಿ ಮಾತನಾಡಿ, ಭಾರತೀಯ ಮಹಿಳೆಗೆ ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಸ್ಥಾನವಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶಿಯ ಸಂಸ್ಕೃತಿ ಉಳಿಸಿ-ಬೆಳೆಸುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಮಹಿಳಾ ಅಭಿವೃದ್ಧಿಯಿಂದ ಸಮಾಜದ ಪ್ರಗತಿ ಸಾಧ್ಯ ಎಂದರು.
ಜಯಶ್ರೀ ರೆಡ್ಡಿ, ಮಂಗಲಾ ದೇಶಮುಖ, ಸುಮಂಗಲಾ ಇಟಗಿ, ಸವಿತಾ ಬಿದರಳ್ಳಿ, ರೇಣುಕಾ ಮಡಿವಾಳರ, ಮಕ್ತುಂಬಿ ಹಣಗಿ, ಸವಿತಾ ಭಾಂಡಗೆ, ಮಂಜುಳಾ ಹುಲ್ಲಣ್ಣವರ, ಅಂಬಿಕಾ ಕೋಳಿವಾಡ, ಶ್ವೇತಾ ಕಾರುಡಗಿಮಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net