ಪತಿಗೆ ಹಾರೆಯಿಂದ ಹೊಡೆದು ಕೊಂದ ಪತ್ನಿ

ವಿಶ್ವನಾಥ ಹಾಗೂ ಕವಿತಾ ದಂಪತಿ
ವಿಶ್ವನಾಥ ಹಾಗೂ ಕವಿತಾ ದಂಪತಿ
Published on
ನರಗುಂದ:
ಡಿಪ್ಲೊಮಾ ಪದವೀಧರ ವಿಶ್ವನಾಥ ಶ್ರೀಶೈಲಪ್ಪ ಹಾದಿಮನಿ (28) ಹತ್ಯೆಗೀಡಾದ ಪತಿ. ಕವಿತಾ (ಶ್ವೇತಾ) ಹಾದಿಮನಿ (26) ಹತ್ಯೆಗೈದ ಪತ್ನಿ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ದಂಪತಿಗೆ ಮೂರು ವರ್ಷದ ಪುತ್ರನಿದ್ದಾನೆ.
ಘಟನೆ ವಿವರ: ರಡ್ಡೇರನಾಗನೂರ ಗ್ರಾಮದ ಮಾಜಿ ಸೈನಿಕರ ಪುತ್ರನಾಗಿದ್ದ ವಿಶ್ವನಾಥ ಹಾದಿಮನಿ ಬಾಗಲಕೋಟೆಯ ಶ್ರೀಕುಮಾರೇಶ್ವರ ನಗರ ಬಡಾವಣೆ ನಿವಾಸಿ, ದೂರದ ಸಂಬಂಧಿ ಕವಿತಾಳನ್ನು ಪ್ರೀತಿಸಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ 2022ರ ಫೆ. 7ರಂದು ಮದುವೆಯಾಗಿದ್ದರು.
ಆದರೆ, ಮದುವೆ ನಂತರ ಗಂಡನೊಂದಿಗೆ ಸಂಸಾರ ನಡೆಸಲು ಹಿಂದೇಟು ಹಾಕುತ್ತಿದ್ದಳು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಗಂಡ-ಹೆಂಡತಿ ನಡುವೆ ಮನೆಯಲ್ಲಿ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಹೀಗಾಗಿ ಕವಿತಾ ಕಳೆದ ಮೂರು ವರ್ಷಗಳ ಹಿಂದೆಯೇ ತವರು ಮನೆಗೆ ಹೋಗಿದ್ದಳು.
ಈ ನಡುವೆ ವಿಶ್ವನಾಥನ ಸಹೋದರಿಯ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ತಂದೆ-ತಾಯಿ ಒತ್ತಾಯದ ಮೇರೆಗೆ ಕವಿತಾ ಇತ್ತೀಚೆಗೆ ರಡ್ಡೇರನಾಗನೂರ ಗ್ರಾಮಕ್ಕೆ ಆಗಮಿಸಿದ್ದಳು. ನಾದಿನಿಯ ಮದುವೆ ಬಳಿಕ ಪುನಃ ತವರಿಗೆ ವಾಪಸಾಗಿದ್ದಳು. ಒಂದು ವಾರದ ಬಳಿಕ ಮೇ 18ರಂದು ಕವಿತಾ ಪತಿಯ ಮನೆಗೆ ವಾಪಸಾಗಿದ್ದಳು. 
ಮಂಗಳವಾರ ರಾತ್ರಿ ಗಂಡ ಮಲಗಿದ್ದಾಗ ಕಬ್ಬಿಣದ ರಾಡ್​ನಿಂದ ತಲೆಗೆ ಬಲವಾಗಿ ಹೊಡೆದಿದ್ದು, ವಿಶ್ವನಾಥ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ವೇಳೆ ಮೃತನ ತಂದೆ ಶ್ರೀಶೈಲಪ್ಪ ಹಾಗೂ ತಾಯಿ ಗೌರವ್ವ ಮನೆಯ ಮಹಡಿ ಮೇಲೆ ಮಲಗಿದ್ದರು. ಬುಧವಾರ ಬೆಳಗ್ಗೆ ಅತ್ತೆ-ಮಾವ ಕೆಳಗಿಳಿದು ಬಂದಾಗ, ರಾತ್ರಿ ತಮ್ಮಿಬ್ಬರ ನಡುವೆ ನಡೆದ ಗಲಾಟೆ ಬಗ್ಗೆ ಕವಿತಾ ವಿವರಿಸಿದ್ದಾಳೆ. ತಕ್ಷಣ ಗೌರವ್ವ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಪಿಐ ಸತ್ಯಪ್ಪ ಮಾಳಗೊಂಡ ಆರೋಪಿ ಕವಿತಾಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net