

ನರಗುಂದ: ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ (
DEMOCRACY
) ಪರಿಕಲ್ಪನೆ ಕೊಟ್ಟ ನಾಡು ನಮ್ಮದಾಗಿದೆ. ಇಂತಹ ಮಣ್ಣಿನಲ್ಲಿ ಜನಿಸಿದವರೆಲ್ಲರೂ ಭಾಗ್ಯವಂತರು ಎಂದು ಶಿಕ್ಷಕಿ ಎ.ಎಸ್. ಪತ್ತಾರ ಹೇಳಿದರು.
ಪಟ್ಟಣದ ರೋಟರ‌್ಯಾಕ್ಟ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ಸಂಸತ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ರಾಜು ಕಲಾಲ ಪ್ರಮಾಣವಚನ ಬೋಧಿಸಿದರು. ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಫ್.ವಿ. ಶಿರುಂದಮಠ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪಿ.ವಿ. ಕೆಂಚನಗೌಡ್ರ, ಸಂಯೋಜಕ ಬಿ.ಎಸ್. ಕಬಾಡ್ರ, ಶಿಕ್ಷಕಿ ಎಸ್.ಎಸ್. ಸಂಪಗಾವ, ಎಸ್.ವಿ. ಬ್ಯಾಹಟ್ಟಿ, ಎಂ.ಆರ್. ಜವಳಿ, ಉಪಸ್ಥಿತರಿದ್ದರು. ಜೆ.ಸಿ. ಹಿರೇಮನಿ, ಎಸ್.ಎಂ. ಹೂಗಾರ, ಕಗಧಾಳ, ಪಿ.ಎಸ್.ದಂಡಿನ ಕಾರ್ಯಕ್ರಮ ನಿರ್ವಹಿಸಿದರು.