

ಒಂದು ವಾರದಿಂದ ಬನಹಟ್ಟಿ, ಮೂಗನೂರ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲವೆಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದವು. ಶಾಸಕರ ಸೂಚನೆ ಮೇರೆಗೆ ಸೋಮವಾರ ಪರಿಶೀಲಿಸಿದಾಗ 10 ದಿನಗಳಲ್ಲಿ ಸುಮಾರು 34 ಲಕ್ಷ ಲೀಟರ್ ನೀರು ಕೊಡಬೇಕಿತ್ತು. ಆದರೆ, 25 ಲಕ್ಷ ಲೀಟರ್ ಮಾತ್ರ ಪೂರೈಕೆಯಾಗಿದೆ. ಎರಡೂ ಗ್ರಾಮಗಳ ಮಧ್ಯೆ ಒಂದೇ ಟ್ಯಾಂಕ್ ಇರುವುದರಿಂದ ನೀರು ಪೂರೈಕೆ ಮತ್ತು ಹಂಚಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಎರಡು ಊರಿನ ಜನರಿಗೆ ಹೆಚ್ಚುವರಿಯಾಗಿ 3-4 ಲಕ್ಷ ನೀರು ಬೇಕಾಗುವುದರಿಂದ ಇದನ್ನು ಎರಡ್ಮೂರು ದಿನಗಳಲ್ಲಿ ಪೊರೈಸಿ ಸಮಸ್ಯೆಗೆ ಶಾಶ್ವತ ಮುಕ್ತಿ ಕಂಡುಕೊಳ್ಳುತ್ತೇವೆ.